HomeEntertainmentಧ್ರುವ ಸರ್ಜಾ ಅಭಿಮಾನಿಗಳಿಗೆ ನಿರಾಸೆ: ಐದು ದಿನ ಕಳೆದರೂ 20 ಕೋಟಿ ದಾಟದ ‘ಕೆಡಿ’ ಸಿನಿಮಾದ...

ಧ್ರುವ ಸರ್ಜಾ ಅಭಿಮಾನಿಗಳಿಗೆ ನಿರಾಸೆ: ಐದು ದಿನ ಕಳೆದರೂ 20 ಕೋಟಿ ದಾಟದ ‘ಕೆಡಿ’ ಸಿನಿಮಾದ ಗಳಿಕೆ

ಬೆಂಗಳೂರು: ಬಿಡುಗಡೆಗೂ ಮುನ್ನವೇ ಹಾಡು ಮತ್ತು ಟ್ರೈಲರ್ ಮೂಲಕ ಭಾರಿ ಸಂಚಲನ ಮೂಡಿಸಿದ್ದ ‘ಕೆಡಿ: ದ ಡೆವಿಲ್’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋಲುತ್ತಿದೆ. ಸಂಜಯ್ ದತ್ ಅವರ ಅಬ್ಬರದ ನಟನೆ ಮತ್ತು ಧ್ರುವ ಸರ್ಜಾ ಅವರ ಖದರ್ ಇದ್ದರೂ ಸಹ, ಸಿನಿಮಾ ಐದು ದಿನಗಳಲ್ಲಿ ಅತಿ ಕಡಿಮೆ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ.

ಏಪ್ರಿಲ್ 30 ರಂದು ಅದ್ಧೂರಿಯಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ, ಮೊದಲ ನಾಲ್ಕು ದಿನಗಳಲ್ಲಿ ಕೇವಲ 13.72 ಕೋಟಿ ರೂಪಾಯಿ ಗಳಿಸಿದೆ. ಐದನೇ ದಿನದ ಅಂತ್ಯಕ್ಕೆ ಭಾರತದಲ್ಲಿನ ಒಟ್ಟು ಗಳಿಕೆ 16 ಕೋಟಿ ರೂಪಾಯಿ ದಾಟಿದ್ದು, ವಿಶ್ವಾದ್ಯಂತ ಸುಮಾರು 20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿಗಳು ತಿಳಿಸಿವೆ. ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಈ ಮಟ್ಟದ ಗಳಿಕೆ ತೀವ್ರ ಆಘಾತ ನೀಡಿದೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಕಿಚ್ಚ ಸುದೀಪ್ ಮತ್ತು ಜಿಶು ಸೇನ್ ಗುಪ್ತಾ ಅಂತಹ ದೊಡ್ಡ ತಾರಾಗಣವೇ ಇತ್ತು. ಅಲ್ಲದೆ, ನೋರಾ ಫತೇಹಿ ಅವರ ಡ್ಯಾನ್ಸ್ ಕೂಡ ಸಿನಿಮಾದ ಹೈಲೈಟ್ ಆಗಿತ್ತು. ಆದರೆ ದುರದೃಷ್ಟವಶಾತ್ ಚಿತ್ರಕ್ಕೆ ಸಿಕ್ಕ ನೆಗೆಟಿವ್ ರಿವ್ಯೂಗಳು ಮತ್ತು ವೀಕ್ಷಕರ ನೀರಸ ಪ್ರತಿಕ್ರಿಯೆ ಸಿನಿಮಾದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಸಿನಿಮಾ ಹಾಕಿದ ಬಂಡವಾಳವನ್ನು ಮರಳಿ ಪಡೆಯುವುದು ಕೂಡ ಕಷ್ಟಕರ ಎನ್ನಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರ್ದೇಶಕ ಪ್ರೇಮ್ ಅವರ ಶೈಲಿಯ ಮೇಕಿಂಗ್ ಇದ್ದರೂ ಕಥೆಯಲ್ಲಿನ ದೌರ್ಬಲ್ಯವೇ ಸಿನಿಮಾದ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ದೊಡ್ಡ ಮಟ್ಟದ ಪ್ರಚಾರ ನಡೆಸಿದರೂ ಪ್ರೇಕ್ಷಕರು ಚಿತ್ರಮಂದಿರದತ್ತ ಬಾರದಿರುವುದು ಚಿತ್ರತಂಡಕ್ಕೆ ಭಾರಿ ನಷ್ಟ ತಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular