ಮದ್ಯ ಹಗರಣ ವಿಚಾರಣೆಗೆ ಸಿಎಂ ಪುತ್ರಿಗೆ ಇಡಿ ನೋಟಿಸ್: ಬಿಜೆಪಿ ಸರ್ಕಾರ ಟೀಕಿಸಿದ ಎಂಎಲ್ಸಿ ಕವಿತಾ

ನವದೆಹಲಿ: ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರಿಗೆ ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ನಿಜಾಮಾಬಾದ್‌ ನಲ್ಲಿ ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕವಿತಾ ಅವರು, ಕಳೆದ ಒಂದು ವರ್ಷದಿಂದ ಪ್ರಕರಣ ಟಿವಿ ಧಾರಾವಾಹಿಯಂತೆ ನಡೆಯುತ್ತಿದೆ. ತೆಲಂಗಾಣ ಜನತೆ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಚುನಾವಣೆಗಳು ಸಮೀಪಿಸುತ್ತಿರುವಾಗ, ನೋಟೀಸ್‌ಗಳ ಸಂಚಿಕೆಗೆ ಸಾಕ್ಷಿಯಾಗುವುದು ಸಹಜ. ಬಿಜೆಪಿಯವರು ಹೀಗೆ ಮಾಡುತ್ತಾರೆ ಎಂದು ಮೊದಲ ದಿನದಿಂದ ಹೇಳುತ್ತಲೇ ಬಂದಿದ್ದೇವೆ. ನಾನು ಪಕ್ಷದ ಕಾನೂನು ತಂಡಕ್ಕೆ ನೋಟಿಸ್ ಕಳುಹಿಸಿದ್ದೇನೆ ಮತ್ತು ಅವರ ಸಲಹೆಯಂತೆ ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಅವರು ಹೇಳಿದರು.

ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಕವಿತಾಗೆ ಸಮನ್ಸ್ ನೀಡಿದೆ. ಇಡಿ ಕವಿತಾಗೆ ಸಮನ್ಸ್ ನೀಡುತ್ತಿದ್ದಂತೆ ತೆಲಂಗಾಣ ರಾಜಕೀಯ ವಲಯಗಳಲ್ಲಿ ಭಾರಿ ಚರ್ಚೆಯಾಗಿದೆ. ಕವಿತಾ ಮಾರ್ಚ್ 16, 20 ಮತ್ತು 21 ರಂದು ಇಡಿ ಮುಂದೆ ಹಾಜರಾಗಿದ್ದರು. ಇಡಿ ಪ್ರಕಾರ, ಅಬಕಾರಿ ನೀತಿ ಪ್ರಕರಣದಲ್ಲಿ ಸೌತ್ ಗ್ರೂಪ್‌ನ ಪ್ರತಿನಿಧಿಗಳಲ್ಲಿ ಕವಿತಾ ಕೂಡ ಒಬ್ಬರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read