HomeLatest Newsಜಾನುವಾರು ಮೇಯಿಸಲು ಹೋಗಿ ಕಾವೇರಿ ಪ್ರವಾಹಕ್ಕೆ ಸಿಲುಕಿ ಮರವೇರಿ ಕುಳಿತ ತಂದೆ-ಮಗ: ಪೊಲೀಸರಿಂದ ರಕ್ಷಣೆ

ಜಾನುವಾರು ಮೇಯಿಸಲು ಹೋಗಿ ಕಾವೇರಿ ಪ್ರವಾಹಕ್ಕೆ ಸಿಲುಕಿ ಮರವೇರಿ ಕುಳಿತ ತಂದೆ-ಮಗ: ಪೊಲೀಸರಿಂದ ರಕ್ಷಣೆ

ಮೈಸೂರು: ಜಾನುವಾರು ಮೇಯಿಸಲು ಹೋಗಿದ್ದ ತಂದೆ-ಮಗ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಮರವೇರಿಕುಳಿತು ರಕ್ಷಿಸಿಕೊಂಡಿರುವ ಘಟನೆ ಬನ್ನೂರು ಬಳಿಯ ಮಾಕನಹಳ್ಳಿಯಲ್ಲಿ ನಡೆದಿದೆ.

ಮಾಕನಹಳ್ಳಿ ಗ್ರಾಮದ ಕೃಷ್ಣಗೌಡ ಮತ್ತು ಅವರ ಮಗ ಪ್ರವೀಣ್ ಜಾನೂವಾರು ಮೇಯಿಸಲೆಂದು ನಿನ್ನೆ ಕಾವೇರಿ ನದಿಯ ಮತ್ತೊಂದು ಡದದಲ್ಲಿನ ದೇವಿ ತೋಪಿಗೆ ಹೋಗಿದ್ದರು. ಸಂಜೆ ಅಲ್ಲಿಂದ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನದಿಯನ್ನು ದಾಟಿ ಬರು ಸಾಧ್ಯವಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾವಾಹೋಪಾದಿಯಲ್ಲಿ ನೀರು ಸ್ಥಳವನ್ನು ಆವರಿಸಿಕೊಳ್ಳುತ್ತಿದ್ದಂತೆ ಬೇರೆದಾರಿ ಕಾಣದೇ ತಂದೆ-ಮಗ ಇಬ್ಬರೂ ಅಲ್ಲಿಯೇ ಇದ್ದ ಮರವೇರಿ ಕುಳಿತು ಜೀವ ರಕ್ಷಿಸಿಕೊಂಡಿದ್ದಾರೆ. ಜಾನುವಾರು ಮೇಯಿಸಲು ದೇವಿ ತೋಪಿಗೆ ಹೋದವರು ವಾಪಸ್ ಆಗಿಲ್ಲ ಎಂಬ ಬಗ್ಗೆ ಕುಟುಂಬದವರಿಂದ ಮಹಿತಿ ತಿಳಿದ ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮರವೇರಿ ಕುಳಿತಿದ್ದ ತಂದೆ-ಮಗನನ್ನು ದೋಣಿ ಸಹಾಯದಿಂದ ರಕ್ಷಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular