HomeEntertainmentBIG NEWS: ಕಾಟೇರ ಸಿನಿಮಾಗೆ ಪೈರಸಿ ಕಾಟ; ಓರ್ವ ಆರೋಪಿ ಬಂಧನ

BIG NEWS: ಕಾಟೇರ ಸಿನಿಮಾಗೆ ಪೈರಸಿ ಕಾಟ; ಓರ್ವ ಆರೋಪಿ ಬಂಧನ

ರಾಯಚೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಸಿನಿಮಾಗೆ ಪೈರಸಿ ಕಾಟ ಆರಂಭವಾಗಿದೆ.

ಕಿಡಿಗೇಡಿಗಳು ಕಾಟೇರ ಸಿನಿಮಾ ಪೈರಸಿ ಕಾಪಿಯನ್ನು ಟೆಲಿಗ್ರಾಂ ಮೂಲಕ ಮಾರಾಟ ಮಾಡುತ್ತಿದ್ದು, ರಾಯಚೂರು ಜಿಲ್ಲೆಯ ಸದರ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೌನೇಶ್ ಎಂದು ಗುರುತಿಸಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡಾದ ಯುವಕ ಮೌನೇಶ್ 40 ರೂಪಾಯಿಗೆ ಕಾಟೇರ ಸಿನಿಮಾ ಪೈರಸಿ ಲಿಂಕ್ ಮಾರುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪ್ರಕರಣದ ಪ್ರಮುಖ ಆರೋಪಿ ಉಪೇಂದ್ರ ಹಾಗೂ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular