ತಮಿಳು ಮಾತನಾಡದ್ದಕ್ಕೆ ರೆಹಮಾನ್‌ ಪತ್ನಿಗೆ ನಟಿ ಟಾಂಗ್;‌ ಹೀಗಿತ್ತು ಸಂಗೀತ ನಿರ್ದೇಶಕನ ಉತ್ತರ

ವೇದಿಕೆಯಲ್ಲಿ ತಮಿಳಿನಲ್ಲಿ ಮಾತನಾಡದ ಸಂಗೀತ ನಿರ್ದೇಶಕ ಎ. ಆರ್ .ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ಅವರನ್ನು ಗೇಲಿ ಮಾಡಿದ ನಟಿ ಕಸ್ತೂರಿ ಶಂಕರ್ ಅವರಿಗೆ ಎ.ಆರ್. ರೆಹಮಾನ್ ನೀಡಿರುವ ಉತ್ತರ ಗಮನ ಸೆಳೆದಿದೆ. ಅಸಂಬದ್ಧ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಡುವಲ್ಲಿ ತಾವು ನಿಸ್ಸೀಮರು ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇತ್ತೀಚೆಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಎ.ಆರ್. ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ಅವರನ್ನು ಮಾತನಾಡಲು ಕೇಳಿದಾಗ, ರೆಹಮಾನ್, ತಮಿಳಿನಲ್ಲಿ ಮಾತನಾಡುವಂತೆ ತಮಾಷೆಯಾಗಿ ಒತ್ತಾಯಿಸುತ್ತಾರೆ. ನಂತರ ಸಾಯಿರಾ ಬಾನು ಅವರು ತನಗೆ ಚೆನ್ನಾಗಿ ತಮಿಳಿನಲ್ಲಿ ಮಾತನಾಡಲು ಬರುವುದಿಲ್ಲ ಎಂದು ಕ್ಷಮೆ ಕೇಳಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಒತ್ತು ನೀಡುವ ಕ್ರಮವಿದು ಎಂದು ರೆಹಮಾನ್ ನಡೆಯನ್ನು ಹಲವರು ಪ್ರಶಂಸಿಸಿದ್ದರು.

ಈ ವೈರಲ್ ವಿಡಿಯೋನ ಹಂಚಿಕೊಂಡಿರುವ ನಟಿ ಕಸ್ತೂರಿ ಶಂಕರ್ “ಏನು? ಎ.ಆರ್. ರೆಹಮಾನ್ ಅವರ ಹೆಂಡತಿಗೆ ತಮಿಳು ಗೊತ್ತಿಲ್ಲ? ಅವರ ಮಾತೃಭಾಷೆ ಯಾವುದು ? ಅವರು ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ ? ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.

ಅವರ ಟ್ವೀಟ್‌ಗೆ ತಮಿಳಿನಲ್ಲಿ ಪ್ರತಿಕ್ರಿಯಿಸಿದ ಎ.ಆರ್. ರೆಹಮಾನ್, “”ಪ್ರೀತಿಗೆ ಗೌರವ” ಎಂದು ಹೇಳಿದ್ದಾರೆ. ಟ್ವೀಟ್ ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ .

https://twitter.com/arrahman/status/1651617784093130752?ref_src=twsrc%5Etfw%7Ctwcamp%5Etweetembed%7Ctwterm%5E1651617784093130752%7Ctwgr%5Ef134e04ea3f70e2d916de61e204c08be3a1c4ee9%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fkasturitakesadigatarrahmanswifefornotspeakingintamilps2composergivesasavagereply-newsid-n494448544

https://twitter.com/arrahman/status/1651617784093130752?ref_src=twsrc%5Etfw%7Ctwcamp%5Etweetembed%7Ctwterm%5E1651622491100676097%7Ctwgr%5Ef134e04ea3f70e2d916de61e204c08be3a1c4ee9%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fkasturitakesadigatarrahmanswifefornotspeakingintamilps2composergivesasavagereply-newsid-n494448544

https://twitter.com/arrahman/status/1651617784093130752?ref_src=twsrc%5Etfw%7Ctwcamp%5Etweetembed%7Ctwterm%5E1651664293090426880%7Ctwgr%5Ef134e04ea3f70e2d916de61e204c08be3a1c4ee9%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fkasturitakesadigatarrahmanswifefornotspeakingintamilps2composergivesasavagereply-newsid-n494448544

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read