HomeLatest NewsBREAKING: ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ದಾಖಲೆ ಇಲ್ಲದ ಹಣ ಸಾಗಾಟ: ಹಣದ...

BREAKING: ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ದಾಖಲೆ ಇಲ್ಲದ ಹಣ ಸಾಗಾಟ: ಹಣದ ಸಮೇತ ಇಬ್ಬರು ವಶಕ್ಕೆ

ಕಾರವಾರ: ಖಾಸಗಿ ಬಸ್ ನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಅಕ್ರಮ ಸಾಗಾಟ ಮಾಡುತ್ತುದ್ದ ವೇಳೆ ಹಣದ ಸಮೇತ ಇಬ್ಬರನ್ನು ವಶಕ್ಕೆ ಪದೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.

ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಹಣದ ಸಮೇತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಬೆಂಗಳೂರಿಗೆ 1 ಕೋಟಿ ರೂ ಹಣವನ್ನು ಸಾಗಿಸಲಾಗುತ್ತಿತ್ತು. ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ಪರಿಶೀಲನೆ ನಡೆಸಿದಾಗ ಈ ಹಣ ಪತ್ತೆಯಾಗಿದೆ.

ಕಲ್ಪೇಶಕುಮಾರ್ ಹಾಗೂ ಬೊಂಬ್ರಾ ರಾಮ್ ಎಂಬುವವರ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ. ದಾಖಲೆ ಇಲ್ಲದೇ ಹಣ ಸಾಗಾಟ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. Mxon ಎಲೆಕ್ಟ್ರಿಕ್ ಹಾರ್ಡ್ ವೇರ್ ಕಂಪನಿಗೆ ಸೇರಿದ ಹಣ ಇದಾಗಿದ್ದು, ತೆರಿಗೆ ತಪ್ಪಿಸಲು ಬ್ಯಾಗ್ ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಹಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular