HomeKarnatakaBREAKING: ಜೈಲಿನಲ್ಲಿಯೇ ಕೈದಿಗಳ ನಡುವೆ ಗಲಾಟೆ: ಓರ್ವನ ಸ್ಥಿತಿ ಗಂಭೀರ

BREAKING: ಜೈಲಿನಲ್ಲಿಯೇ ಕೈದಿಗಳ ನಡುವೆ ಗಲಾಟೆ: ಓರ್ವನ ಸ್ಥಿತಿ ಗಂಭೀರ

ಕಾರವಾರ: ಜೈಲಿನಲ್ಲಿ ಕೈದಿಗಳ ನಡುವೆಯೇ ಗಲಾಟೆ ನಡೆದು, ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾರಾಗೃಹದಲ್ಲಿ ನಡೆದಿದೆ.

ನಾಲ್ವರು ಕೈದಿಗಳ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದೆ. ಕಲ್ಲಿನಿಂದ ಕೈದಿಗಳು ಜಜ್ಜಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಓರ್ವನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈದಿಗಳ ಗಲಾಟೆ ಹಿನ್ನೆಲೆಯಲ್ಲಿ ಎಎಸ್ ಪಿ ಜಯಕುಮಾರ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular