HomeLatest Newsಬುಡಕಟ್ಟು ಸಮುದಾಯಗಳ ಏಳಿಗೆಯ ಅಭಿಯಾನಕ್ಕೆ ಕರ್ನಾಟಕಕ್ಕೆ 5 ಪ್ರಶಸ್ತಿಗಳ ಗರಿಮೆ : CM ಸಿದ್ದರಾಮಯ್ಯ ಸಂತಸ

ಬುಡಕಟ್ಟು ಸಮುದಾಯಗಳ ಏಳಿಗೆಯ ಅಭಿಯಾನಕ್ಕೆ ಕರ್ನಾಟಕಕ್ಕೆ 5 ಪ್ರಶಸ್ತಿಗಳ ಗರಿಮೆ : CM ಸಿದ್ದರಾಮಯ್ಯ ಸಂತಸ

ಬೆಂಗಳೂರು :  ಬುಡಕಟ್ಟು ಸಮುದಾಯಗಳ ಏಳಿಗೆಯ ಅಭಿಯಾನಕ್ಕೆ ಕರ್ನಾಟಕಕ್ಕೆ 5 ಪ್ರಶಸ್ತಿಗಳು ಸಿಕ್ಕಿದ್ದು,  ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 17, 2025 ರಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಆದಿ ಕರ್ಮಯೋಗಿ ಅಭಿಯಾನ (AKA) ಮತ್ತು ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ (DA JGUA) ಯೋಜನೆಯ ಅನುಷ್ಠಾನದ ಸಾಧನೆಗಳನ್ನು ಗುರುತಿಸಲು “ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಸಮಾವೇಶ-2025” ಅನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯವು ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

1)ವಿಕಸಿತ ಭಾರತಕ್ಕಾಗಿ ಬುಡಕಟ್ಟುಗಳ ಸಬಲೀಕರಣ ವಿಭಾಗದಲ್ಲಿ 5 ರಾಷ್ಟ್ರೀಯ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

• ಚಿಕ್ಕಬಳ್ಳಾಪುರ – DA JGUA ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ

• ಚಿಕ್ಕಬಳ್ಳಾಪುರ – ಆದಿ ಕರ್ಮಯೋಗಿ ಅಭಿಯಾನ (AKA)

• ಬೀದರ್ – ಆದಿ ಕರ್ಮಯೋಗಿ ಅಭಿಯಾನ (AKA)

• ರಾಯಚೂರು – ಆದಿ ಕರ್ಮಯೋಗಿ ಅಭಿಯಾನ (AKA)

• ಬಳ್ಳಾರಿ – ಆದಿ ಕರ್ಮಯೋಗಿ ಅಭಿಯಾನ (AKA)

2)ಧರತಿ ಅಭಾ ಜನಭಾಗೀದಾರ ಅಭಿಯಾನದಡಿಯಲ್ಲಿ ರಾಜ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಜಿಲ್ಲೆ ಚಿಕ್ಕಬಳ್ಳಾಪುರ

3)ಉತ್ತಮ ಪ್ರದರ್ಶನ ತೋರಿದ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರು ಶ್ರೀ ಎ. ರಾಜಶೇಖರ್, ಸಂಶೋಧನಾ ಅಧಿಕಾರಿ, ಬುಡಕಟ್ಟು ಅಭಿವೃದ್ಧಿ ಇಲಾಖೆ

ಬುಡಕಟ್ಟು ಜನಾಂಗದವರ ಏಳಿಗೆಗೆ ನಮ್ಮ ಸರ್ಕಾರದ ಸದಾ ಬದ್ಧವಾಗಿದ್ದು, ಪ್ರಶಸ್ತಿ ವಿಜೇತ ತಂಡಗಳಿಗೆ ಅಭಿನಂದನೆಗಳು ಎಂದು ಸಿಎಂ ಪೋಸ್ಟ್ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular