HomeKarnatakaಇನ್ಮುಂದೆ ಭಕ್ತರ ಮನೆ ಬಾಗಿಲಿಗೆ ಬಂದು ತಲುಪಲಿದೆ ದೇವಸ್ಥಾಗಳ ಪ್ರಸಾದ: ಡೋರ್ ಡೆಲಿವರಿ ಯೋಜನೆ ಜಾರಿಗೆ...

ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ ಬಂದು ತಲುಪಲಿದೆ ದೇವಸ್ಥಾಗಳ ಪ್ರಸಾದ: ಡೋರ್ ಡೆಲಿವರಿ ಯೋಜನೆ ಜಾರಿಗೆ ಮುಂದಾದ ಮುಜರಾಯಿ ಇಲಾಖೆ

ಬೆಂಗಳೂರು: ಇನ್ಮುಂದೆ ರಾಜ್ಯದ ಪ್ರತಿ ದೇವಾಲಯಗಳ ಪ್ರಸಾದ ಮನೆ ಬಾಗಿಲಿಗೆ ಬಂದು ತಲುಪಲಿದೆ. ಇಂತದ್ದೊಂದು ವಿನೂತನ ಯೋಜನೆಯನ್ನು ಜಾರಿಗೊಳಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

ತಂತ್ರಜ್ಞಾನದ ಮೂಲಕ ಈಗಾಗಲೇ ಆನ್ ಲೈನ್ ಸೇವೆ, ಆನ್ ಲೈನ್ ಬುಕ್ಕಿಂಗ್ ಜಾರಿಯಾಗಿದೆ. ಇದೇ ರೀತಿ ಭಕ್ತರ ಪ್ರತಿ ಮನೆಗೂ ಪ್ರಸಾದಗಳನ್ನು ತಲುಪಿಸುವ ನಿಟ್ಟಿನಲ್ಲಿ ಡೋರ್ ಡೆಲಿವರಿ ಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಕರ್ನಾಟಕದಾದ್ಯಂತ ಇರುವ ಯಾವುದೇ ದೇವಸ್ಥಾನದ ಪ್ರಸಾದಕ್ಕೆ ಭಕ್ತರು ಆನ್ ಲೈನ್ ಮೂಲಕ ಬುಕ್ ಮಾಡಿದರೆ ಸಾಕು. ಪ್ರಸಾದ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಈಗಾಗಲೇ ಅಂಚೆ ಇಲಾಖೆ ಜೊತೆಗೂ ಮಾತುಕತೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸಾದದ ದರ ಹಾಗೂ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರ ಫಿಕ್ಸ್ ಮಾಡಲು ಅಂಚೆ ಇಲಾಖೆ ಕೂಡ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular