HomeLatest Newsರಾಜ್ಯದ ವಿವಿಧ ಜಿಲ್ಲೆಗಳಲ್ಲಿ 11 ತಹಶೀಲ್ದಾರ್‌ಗಳ ವರ್ಗಾವಣೆ: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 11 ತಹಶೀಲ್ದಾರ್‌ಗಳ ವರ್ಗಾವಣೆ: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರವು ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 11 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಗುರುವಾರ (ಜುಲೈ 2, 2026) ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳನ್ನು ಅದಲು-ಬದಲು ಮಾಡಲಾಗಿದೆ.

ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಜಿ.ಕೆ. ಅವರು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದಾರೆ. ವರ್ಗಾವಣೆಯಾಗಿರುವ ಎಲ್ಲಾ ಅಧಿಕಾರಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ, ತಮಗೆ ನಿಯೋಜಿಸಿರುವ ಹೊಸ ಕಚೇರಿಗಳಿಗೆ ಭೇಟಿ ನೀಡಿ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಿ ವರದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಯಾರಿಗೆ ಎಲ್ಲಿಗೆ ಪೋಸ್ಟಿಂಗ್? ವರ್ಗಾವಣೆಗೊಂಡ 11 ತಹಶೀಲ್ದಾರ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

1.ಕೆ.ಓ. ವಾಲಯ್ಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ತಾಲ್ಲೂಕು ಕಚೇರಿ, ಶಿವಮೊಗ್ಗ ಜಿಲ್ಲೆ.

ವರ್ಗಾವಣೆಗೊಂಡ ಸ್ಥಳ: ತಾಲ್ಲೂಕು ಕಚೇರಿ, ಜಗಳೂರು, ದಾವಣಗೆರೆ ಜಿಲ್ಲೆ (ಜಿ.ಕೆ. ಮಂಜು ಆನಂದ ಅವರ ಜಾಗಕ್ಕೆ).

2.ಕೆ.ಬಿ. ಅಶೋಕ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ವರ್ಗಾವಣೆಗೊಂಡ ಸ್ಥಳ: ತಾಲ್ಲೂಕು ಕಚೇರಿ, ಅರಸೀಕೆರೆ ತಾಲ್ಲೂಕು (ವೈ.ಪಿ. ಪಾಲಾಕ್ಷ ಅವರ ಜಾಗಕ್ಕೆ).

3.ವೀಣಾ ಕುಲಕರ್ಣಿ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಸಹಾಯಕ ಆಯುಕ್ತರ ಕಚೇರಿ, ಕಲಬುರಗಿ.

ವರ್ಗಾವಣೆಗೊಂಡ ಸ್ಥಳ: ಪ್ರಾದೇಶಿಕ ಆಯುಕ್ತರ ಕಚೇರಿ, ಕಲಬುರಗಿ ವಿಭಾಗ (ಶಾರದಾ ಬಿರಾದಾರ್ ಅವರ ಜಾಗಕ್ಕೆ).

4.ಎಸ್. ರವಿ ಅಂಗಡಿ

ಪ್ರಸ್ತುತ ಹುದ್ದೆ: ಕಂದಾಯ ಅಧಿಕಾರಿ, ಮಹಾನಗರ ಪಾಲಿಕೆ, ರಾಯಚೂರು.

ವರ್ಗಾವಣೆಗೊಂಡ ಸ್ಥಳ: ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆ (ಖಾಲಿ ಹುದ್ದೆಗೆ).

5.ಸಾರಿಕಾ ಆರ್. ಶಿಂಗನಮಕ್ಕಿ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಪ್ರಾದೇಶಿಕ ಆಯುಕ್ತರ ಕಚೇರಿ, ಬೆಳಗಾವಿ ವಿಭಾಗ.

ವರ್ಗಾವಣೆಗೊಂಡ ಸ್ಥಳ: ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ (ಖಾಲಿ ಹುದ್ದೆಗೆ).

6.ಶಂಕರ ಗೌಡಿ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಮುಂಡಗೋಡ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ.

ವರ್ಗಾವಣೆಗೊಂಡ ಸ್ಥಳ: ಶಿಷ್ಟಾಚಾರ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ, ಬೆಳಗಾವಿ ಜಿಲ್ಲೆ (ಖಾಲಿ ಹುದ್ದೆಗೆ).

7.ಜಯದೇವ ಸಿ. ಅಷ್ಟಗಿಮಠ

ಪ್ರಸ್ತುತ ಹುದ್ದೆ: ವಿಶೇಷ ತಹಶೀಲ್ದಾರ್ (ವಸೂಲಾತಿ), ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ಬೆಳಗಾವಿ ವಿಭಾಗ, ಧಾರವಾಡ.

ವರ್ಗಾವಣೆಗೊಂಡ ಸ್ಥಳ: ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ (ಖಾಲಿ ಹುದ್ದೆಗೆ).

8.ಮಹಾಂತಗೌಡ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ತಾಲ್ಲೂಕು ಕಚೇರಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ.

ವರ್ಗಾವಣೆಗೊಂಡ ಸ್ಥಳ: ತಾಲ್ಲೂಕು ಕಚೇರಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ (ಖಾಲಿ ಹುದ್ದೆಗೆ).

9.ಎಂ.ಎ. ನಾಗರಾಜ್

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ತಾಲ್ಲೂಕು ಕಚೇರಿ, ಹಾಸನ, ಹಾಸನ ಜಿಲ್ಲೆ.

ವರ್ಗಾವಣೆಗೊಂಡ ಸ್ಥಳ: ತಾಲ್ಲೂಕು ಕಚೇರಿ, ಆಲೂರು, ಹಾಸನ ಜಿಲ್ಲೆ (ಖಾಲಿ ಹುದ್ದೆಗೆ).

10.ನಂದಿನಿ ಎಸ್.ಎ.

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬೆಂಗಳೂರು.

ವರ್ಗಾವಣೆಗೊಂಡ ಸ್ಥಳ: ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ (ಖಾಲಿ ಹುದ್ದೆಗೆ).

11.ಮಂಜುನಾಥ್‌ ಎಸ್‌ ಅರಕೇರಿ

ಪ್ರಸ್ತುತ ಹುದ್ದೆ: ತಹಶೀಲ್ದಾರ್ ಗ್ರೇಡ್-2, ಸ್ಥಳ ನಿರೀಕ್ಷೆಯಲ್ಲಿದ್ದರು.

ವರ್ಗಾವಣೆಗೊಂಡ ಸ್ಥಳ: ಉಪ ವಿಭಾಗಾಧಿಕಾರಿಗಳ ಕಚೇರಿ, ವಿಜಯಪುರ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular