ಧಾರವಾಡ : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿದ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.
ಲೇಖಕರು, ಪ್ರಕಾಶಕರು, ಸಾಹಿತ್ಯಾ ಸಾರ್ವಜನಿಕರು ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮದ ಜೆ.ಸಿ.ರಸ್ತೆ, ಬೆಂಗಳೂರು-560002. ಈ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ, ಕೊರಿಯರ್ ಮೂಲಕ ಜೂನ್ 30, 2026 ರೊಳಗೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ www.sahithyaacademy.karnataka.gov.in ಸಂಪರ್ಕಿಸಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ಸೌಲಭ್ಯ
ಧಾರವಾಡ : ಎಪ್ರಿಲ್-2026 ರ ಮಾಹೆಯಲ್ಲಿ ಆಸ್ತಿ ತೆರಿಗೆ ಪಾವತಿಸಿದಲ್ಲಿ ಪ್ರತಿಶತ ಶೇ. 5 ರ ರಿಯಾಯಿತಿ ಸೌಲಭ್ಯವಿದ್ದು, ಆಸ್ತಿ ತೆರಿಗೆ ಪಾವತಿಸಲು ಏಪ್ರಿಲ್ 06, 2026 ರಿಂದ ಏಪ್ರಿಲ್ 30, 2026 ರವರೆಗೆ ನಿರಂತರವಾಗಿ ಸಾರ್ವಜನಿಕ ರಜೆ ಇದ್ದರೂ ಸಹಿತವಾಗಿ ರಜೆ ಅವಧಿಯಲ್ಲಿ ಪಾಲಿಕೆಯ ಎಲ್ಲಾ ವಲಯ ಕಚೇರಿಗಳಲ್ಲಿ ರಜೆ ದಿನಗಳನ್ನು ಒಳಗೊಂಡಂತೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಸ್ತಿ ತೆರಿಗೆಯ ಚಲನ್‍ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಕಾರಣ ಸಾರ್ವಜನಿಕರು ಎಪ್ರಿಲ್-2026 ರ ಮಾಹೆಯಲ್ಲಿಯೇ ಆಸ್ತಿಕರವನ್ನು ಪಾವತಿಸಿ, ರಿಯಾಯಿತಿ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಸನ್ 2026-27 ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಎಚ್‍ಡಿ-1 (ಕರ್ನಾಟಕ ಒನ್ ಸೇವಾ) ಕೇಂದ್ರಗಳ ಮುಖಾಂತರ ಅಥವಾ http://www.hdmc.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಸಾರ್ವಜನಿಕರಿಗೆ ಆಸ್ತಿಕರ ಸಂದಾಯ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

