BIG NEWS: ರಾಜ್ಯದಲ್ಲಿ ಹೆಚ್ಚುತ್ತಿದೆ ರೂಪಾಂತರಿ ವೈರಸ್ ಅಟ್ಟಹಾಸ; 199 ಜನರಲ್ಲಿ JN.1 ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 199 ಜನರಲ್ಲಿ JN.1 ಸೋಂಕು ಪತ್ತೆಯಾಗಿದೆ.

ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ 199 ಜನರಲ್ಲಿ ರೂಪಾಂತರಿ ವೈರಸ್ ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ 601 ಸ್ಯಾಂಪಲ್ ಗಳನ್ನು ಜಿನೋಮಿಕ್ ಸೀಕ್ವೆನ್ಸ್ ಗೆ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರಬಿದ್ದ ಮೊದಲ ವರದಿಯಲ್ಲಿ 60 ಸ್ಯಾಂಪಲ್ ಗಳಲ್ಲಿ 34 ಜನರಲ್ಲಿ JN.1 ಸೋಂಕು ಪತ್ತೆಯಾಗಿತ್ತು.

ಇದೀಗ 202 ಮಾದರಿಗಳ ವರದಿಯಲ್ಲಿ 165 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ JN.1 ಸೋಂಕಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.

ಇನ್ನು 28 ಜನರಲ್ಲಿ ಎಕ್ಸ್ ಬಿಬಿ ಉಪತಳಿ ಹಾಗೂ 35 ಜನರಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read