ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್ನಲ್ಲಿ ಜನಸಾಮಾನ್ಯರ ಜೇಬಿಗೆ ನೇರ ಲಾಭವಾಗುವಂತಹ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ ಸರ್ಕಾರ ಈಗ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.
5 ಕೆಜಿ ಅಕ್ಕಿ ಬ್ರೇಕ್: ಬಂತು ಇಂದಿರಾ ಕಿಟ್
ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯ ಬದಲಿಗೆ, ಸರ್ಕಾರ ಈಗ ಇಂದಿರಾ ಕಿಟ್ (Indira Kit) ನೀಡಲು ನಿರ್ಧರಿಸಿದೆ.
ಬಡ ಕುಟುಂಬಗಳಿಗೆ ಅವಶ್ಯಕವಿರುವ ದಿನಬಳಕೆಯ ದಿನಸಿ ವಸ್ತುಗಳು (ತೈಲ, ಬೇಳೆ ಇತ್ಯಾದಿ) ಇದರಲ್ಲಿ ಇರಲಿವೆ.
ಬೃಹತ್ ಅನುದಾನ: ಈ ಯೋಜನೆಗಾಗಿ ಸರ್ಕಾರ ಬರೋಬ್ಬರಿ ₹68,200 ಕೋಟಿ ಅನುದಾನ ಮೀಸಲಿಟ್ಟಿದೆ. ಇದು ರಾಜ್ಯದ ಬಜೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತಗಳಲ್ಲಿ ಒಂದಾಗಿದೆ.
ಮಹಿಳೆಯರ ಫೇವರಿಟ್ ಶಕ್ತಿ ಯೋಜನೆ ಫಿಕ್ಸ್
ರಾಜ್ಯದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ನಿಂತುಹೋಗಬಹುದು ಎಂಬ ಊಹಾಪೋಹಗಳಿಗೆ ಸಿಎಂ ತೆರೆ ಎಳೆದಿದ್ದಾರೆ.ಈ ಯೋಜನೆಗಾಗಿ ಬಜೆಟ್ನಲ್ಲಿ ₹5,300 ಕೋಟಿ ಹಣವನ್ನು ಎತ್ತಿಡಲಾಗಿದೆ. ಈ ಮೂಲಕ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತನ್ನ ಬೆಂಬಲ ಮುಂದುವರಿಸಿದೆ.
ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ₹5,000 ಗಿಫ್ಟ್
ಧಾರ್ಮಿಕ ಪ್ರವಾಸ ಮಾಡುವ ಭಕ್ತರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಜಮ್ಮು-ಕಾಶ್ಮೀರದ ಪವಿತ್ರ ವೈಷ್ಣೋದೇವಿ ದರ್ಶನಕ್ಕೆ ಹೋಗುವ ರಾಜ್ಯದ ಪ್ರತಿಯೊಬ್ಬ ಯಾತ್ರಿಕರಿಗೆ ₹5,000 ಸಹಾಯಧನ ನೀಡುವುದಾಗಿ ಘೋಷಿಸಲಾಗಿದೆ.

