HomeKarnatakaಬೆಂಗಳೂರು- ಕರ್ನಾಟಕದ ನೂತನ ರಾಜ್ಯಪಾಲಾಗಿ ನಾಳೆ ಬಿಜೆಪಿ ಹಿರಿಯ ನಾಯಕಿ ಡಾ. ಸುಧಾ ಯ

ಬೆಂಗಳೂರು- ಕರ್ನಾಟಕದ ನೂತನ ರಾಜ್ಯಪಾಲಾಗಿ ನಾಳೆ ಬಿಜೆಪಿ ಹಿರಿಯ ನಾಯಕಿ ಡಾ. ಸುಧಾ ಯ

ಬೆಂಗಳೂರು- ಕರ್ನಾಟಕದ ನೂತನ ರಾಜ್ಯಪಾಲಾಗಿ ನಾಳೆ ಬಿಜೆಪಿ ಹಿರಿಯ ನಾಯಕಿ ಡಾ. ಸುಧಾ ಯಾದವ್ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಜ ಭವನದ ಗಾಜಿನ ಅರಮನೆಯಲ್ಲಿ ನಡೆಯಲಿರುವ ವರ್ಣ ರಂಜಿತ ಸಮಾರಂಭದಲ್ಲಿ ನೂತನ ರಾಜ್ಯಪಾಲರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರುಅವರು ಅಧಿಕಾರ

ಗೌಪ್ಯತೆ ಬೋಧಿಸಲಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲ ಎಂಬ ಹೆಗ್ಗಳಿಕೆಗೆ ಡಾ. ಸುಧಾ ಯಾದವ್ ಪಾತ್ರರಾಗಲಿದ್ದಾರೆ.

ಈ ಹಿಂದೆ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ವಿ ಎಸ್ ರಮಾದೇವಿಯವರು 1999ರಿಂದ 2002 ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕದ ಹಾಲಿ ರಾಜ್ಯಪಾಲರರಿಂದ ತಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಡಾ. ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಅವರು, ಕಳೆದ ಅಕ್ಟೋಬರ್ 12 ರಂದು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದರು.

ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಇತರ ಗಣ್ಯರು ಭಾಗಿಯಾಗಲಿದ್ದಾರೆ.

ಯಾರು ಈ ಡಾ. ಸುಧಾ ಯಾದವ್?

*ಯಾರು ಈ ಡಾ. ಸುಧಾ ಯಾದವ್?*

ಡಾ. ಸುಧಾ ಯಾದವ್ ಅವರು ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದವರು. ರಸಾಯನಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು, ರೂರ್ಕಿ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಹಾಗೂ ಪಿಎಚ್‌ಡಿ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಈ ಸಂಸ್ಥೆ ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿ (ಐಐಟಿ ರೂರ್ಕಿ) ಎಂದು ಪ್ರಸಿದ್ಧವಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಶೈಕ್ಷಣಿಕ ಅರ್ಹತೆ ಗಳಿಸಿದ್ದ ಸುಧಾ ಯಾದವ್ ಅವರ ಬದುಕಿನಲ್ಲಿ 1999ರ ಕಾರ್ಗಿಲ್ ಯುದ್ಧ ಮಹತ್ವದ ತಿರುವು ತಂದಿತು. ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದರು. ಪತಿಯ ನಿಧನದ ಬಳಿಕ ಅವರು ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ವೈಯಕ್ತಿಕ ಬದುಕಿನ ಸಂಕಷ್ಟದ ನಡುವೆಯೂ ಸಾರ್ವಜನಿಕ ಸೇವೆಯ ಹಾದಿ ಹಿಡಿದ ಅವರು, ಕ್ರಮೇಣ ಹರಿಯಾಣದ ರಾಜಕೀಯದಲ್ಲಿ ಗುರುತಿಸಿಕೊಂಡು ರಾಷ್ಟ್ರಮಟ್ಟದ ರಾಜಕೀಯ ನಾಯಕಿಯಾಗಿ ಬೆಳೆದರು.

1999ರಲ್ಲಿ ಲೋಕಸಭೆ ಪ್ರವೇಶ

*1999ರಲ್ಲಿ ಲೋಕಸಭೆ ಪ್ರವೇಶ*

*

ಸುಧಾ ಯಾದವ್ ಅವರ ರಾಜಕೀಯ ಪಯಣಕ್ಕೆ 1999ರ ಲೋಕಸಭಾ ಚುನಾವಣೆ ಪ್ರಮುಖ ವೇದಿಕೆಯಾಯಿತು. ಭಾರತೀಯ ಜನತಾ ಪಕ್ಷವು ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರು ಸಂಸತ್ ಪ್ರವೇಶಿಸಿ 2004ರವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದರು.

ಸಂಸದೆಯಾಗಿ ಕಾರ್ಯನಿರ್ವಹಿಸಿದ ಬಳಿಕ ಬಿಜೆಪಿ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಹಿಂದುಳಿದ ವರ್ಗಗಳ ಸಂಘಟನೆಯಾದ ಬಿಜೆಪಿ ಒಬಿಸಿ ಮೋರ್ಚಾದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.

2019ರಿಂದ 2022ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. 2022ರ ಆಗಸ್ಟ್‌ನಲ್ಲಿ ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಲ್ಲಿ ಒಂದಾದ ಸಂಸದೀಯ ಮಂಡಳಿಗೆ ಅವರನ್ನು ಸೇರ್ಪಡೆಗೊಳಿಸಲಾಯಿತು. ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಅವರು ಸ್ಥಾನ ಪಡೆದರು.

ಹೀಗೆ ಶಿಕ್ಷಣ, ಸಂಸದೀಯ ರಾಜಕೀಯ, ಪಕ್ಷದ ಸಂಘಟನೆ ಹಾಗೂ ಹಿಂದುಳಿದ ವರ್ಗಗಳ ಸಂಬಂಧಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರ ಸಾರ್ವಜನಿಕ ಜೀವನದ ಪ್ರಮುಖ ಭಾಗವಾಗಿದೆ.

ರಾಜ್ಯಪಾಲರ ಹುದ್ದೆಯು ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ಒಳಗೊಂಡಿದ್ದು, ರಾಜ್ಯ ಸರ್ಕಾರ ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯ ನಡುವೆ ಮಹತ್ವದ ಪಾತ್ರ ವಹಿಸುತ್ತದೆ. ಶಾಸನಸಭೆಯ ಅಧಿವೇಶನ, ಮಸೂದೆಗಳಿಗೆ ಸಂಬಂಧಿಸಿದ ಸಂವಿಧಾನಾತ್ಮಕ ಪ್ರಕ್ರಿಯೆಗಳು ಹಾಗೂ ಇತರ ಅಧಿಕೃತ ಕರ್ತವ್ಯಗಳಲ್ಲಿ ರಾಜ್ಯಪಾಲರ ಪಾತ್ರ ಪ್ರಮುಖವಾಗಿದೆ.

ಬಿಜೆಪಿಯ ಸಂಘಟನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸುಧಾ ಯಾದವ್ ಅವರು ಇದೀಗ ರಾಜ್ಯಪಾಲೆಯಾಗಿ ಕರ್ನಾಟಕದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ರಾಜಕೀಯ ಅನುಭವ ಮತ್ತು ಆಡಳಿತಾತ್ಮಕ ಸಂವಿಧಾನಾತ್ಮಕ ಹೊಣೆಗಾರಿಕೆಗಳ ನಡುವಿನ ಅವರ ಮುಂದಿನ ಕಾರ್ಯನಿರ್ವಹಣೆ ರಾಜ್ಯದ ರಾಜಕೀಯ ವಲಯದ ಗಮನ ಸೆಳೆಯಲಿದೆ.

ರಾಜಭವನದಲ್ಲಿ ಹೊಸ ಅಧ್ಯಾಯ

*ರಾಜಭವನದಲ್ಲಿ ಹೊಸ ಅಧ್ಯಾಯ*

ಹರಿಯಾಣದ ಗ್ರಾಮೀಣ ಹಿನ್ನೆಲೆಯಿಂದ ಬಂದ ಸುಧಾ ಯಾದವ್‌ ಅವರು ಉನ್ನತ ಶಿಕ್ಷಣ, ಕಾರ್ಗಿಲ್ ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡ ವೈಯಕ್ತಿಕ ದುರಂತ, ಲೋಕಸಭಾ ಸದಸ್ಯತ್ವ ಹಾಗೂ ಬಿಜೆಪಿಯ ಪ್ರಮುಖ ಸಂಘಟನಾತ್ಮಕ ಹುದ್ದೆಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

ಇದೀಗ ಕರ್ನಾಟಕದ ರಾಜ್ಯಪಾಲೆಯಾಗಿ ನೇಮಕಗೊಂಡಿರುವುದು ಅವರ ಸಾರ್ವಜನಿಕ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಪ್ರಮಾಣವಚನ ಸ್ವೀಕಾರದೊಂದಿಗೆ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಕರ್ನಾಟಕದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ತಮ್ಮ ಹೊಸ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular