HomeLatest NewsWeather Report: ರಾಜ್ಯದಲ್ಲಿ ಇಂದಿನಿಂದ ಹೆಚ್ಚಲಿದೆ ಗರಿಷ್ಠ ತಾಪಮಾನ: ಈ ಜಿಲ್ಲೆಗಳಲ್ಲಿ ಬಿಸಿಲ ಝಳ ಏರಿಕೆ:...

Weather Report: ರಾಜ್ಯದಲ್ಲಿ ಇಂದಿನಿಂದ ಹೆಚ್ಚಲಿದೆ ಗರಿಷ್ಠ ತಾಪಮಾನ: ಈ ಜಿಲ್ಲೆಗಳಲ್ಲಿ ಬಿಸಿಲ ಝಳ ಏರಿಕೆ: ಚರ್ಮದ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ತಾಪಮಾನ ಹೆಚ್ಚಲಿದ್ದು, ಬಿಸಿಲ ಝಳ ಆರಂಭವಾಗಲಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಶಾಖ ಪ್ರಮಾಣ ಹೆಚ್ಚಳವಾಗಲಿದ್ದು, ಚರ್ಮದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಅಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ 32°C, ಕಲಬುರಗಿ, ರಾಯಚೂರು ಭಾಗಗಳಲ್ಲಿ 37°C ದಾಟುವ ಸಾಧ್ಯತೆಯಿದೆ. ಒಣ ಹವಾಮಾನ ಮುಂದುವರಿದು, ಉತ್ತರ ಕರ್ನಾಟಕದಲ್ಲಿ ಶಾಖದ ತೀವ್ರತೆ ಹೆಚ್ಚಳವಾಗಿದೆ. ಮಲೆನಾಡು, ಕರಾವಳಿಯಲ್ಲೂ ಬಿಸಿಲಿನ ಝಳ ಅಧಿಕವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಗರಿಷ್ಠ ತಾಪಮಾನವು 35°C ನಿಂದ 37°C ವರೆಗೆ ದಾಖಲಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಹವಾಮಾನವು ಸಾಮಾನ್ಯವಾಗಿದ್ದು, ತೇವಾಂಶಹೆಚ್ಚಿರಲಿದೆ. ಗರಿಷ್ಠ ತಾಪಮಾನ 34°C ಇರಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಹಿತಕರ ವಾತಾವರಣವಿರಲುದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ 24°C ಇರಲಿದೆ. ತೇವಾಂಶದ ಮಟ್ಟ ಶೇ. 74 ರಷ್ಟಿರುತ್ತದೆ. ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಉಡುಪಿಯಲ್ಲಿ ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ 23°C ದಾಖಲಾಗಲಿದೆ. ಸಮುದ್ರ ತೀರದ ಭಾಗದಲ್ಲಿ ಸೆಖೆ ಪ್ರಮಾಣ ಹೆಚ್ಚಿರಲಿದೆ. ಮಲೆನಾಡಿನ ಈ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ 17°C ಇರಲಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮತ್ತು ಬಳ್ಳಾರಿ ಭಾಗದಲ್ಲಿ ಗರಿಷ್ಠ ತಾಪಮಾನ 32°C ನಿಂದ 34°C ವರೆಗೆ ಇರಲಿದೆ. ಕಲಬುರಗಿ ಮತ್ತು ರಾಯಚೂರು ಭಾಗದಲ್ಲಿ ತಾಪಮಾನವು 37°C ದಾಟುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular