HomeEntertainmentಒಟಿಟಿ ಜಗತ್ತಿಗೆ ಕರಿಷ್ಮಾ ಕಪೂರ್ ಭರ್ಜರಿ ಎಂಟ್ರಿ: ಕುತೂಹಲ ಮೂಡಿಸಿದೆ ಬ್ರೌನ್ ವೆಬ್ ಸೀರೀಸ್ ಝಲಕ್

ಒಟಿಟಿ ಜಗತ್ತಿಗೆ ಕರಿಷ್ಮಾ ಕಪೂರ್ ಭರ್ಜರಿ ಎಂಟ್ರಿ: ಕುತೂಹಲ ಮೂಡಿಸಿದೆ ಬ್ರೌನ್ ವೆಬ್ ಸೀರೀಸ್ ಝಲಕ್

ಬಾಲಿವುಡ್‌ನ ಹಿರಿಯ ನಟಿ ಕರಿಷ್ಮಾ ಕಪೂರ್ ಸುದೀರ್ಘ ಬಿಡುವಿನ ನಂತರ ಮತ್ತೊಮ್ಮೆ ಬಣ್ಣದ ಲೋಕದಲ್ಲಿ ಸಕ್ರಿಯರಾಗುತ್ತಿದ್ದಾರೆ. ಜೂನ್ 5 ರಿಂದ ಪ್ರಸಾರವಾಗಲಿರುವ ‘ಬ್ರೌನ್’ ಎಂಬ ಹೊಚ್ಚಹೊಸ ವೆಬ್ ಸೀರೀಸ್ ಮೂಲಕ ಅವರು ಒಟಿಟಿ ಜಗತ್ತಿಗೆ ಅದ್ಧೂರಿ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಪ್ರಮುಖ ಒಟಿಟಿ ವೇದಿಕೆಯಾದ ಜೀ 5 ನಲ್ಲಿ ಈ ಸರಣಿ ಬಿಡುಗಡೆಯಾಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಇದರ ಟ್ರೈಲರ್ ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಅಭಿನಯ್ ದೇವ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವೆಬ್ ಸೀರೀಸ್ ಸಂಪೂರ್ಣವಾಗಿ ಕ್ರೈಮ್, ಮಿಸ್ಟರಿ ಹಾಗೂ ಸೈಕಾಲಜಿಕಲ್ ಡ್ರಾಮಾ ಕಥಾಹಂದರವನ್ನು ಹೊಂದಿದೆ. 90ರ ದಶಕದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕರಿಷ್ಮಾ ಕಪೂರ್, ಈ ಸರಣಿಯಲ್ಲಿ ಹಿಂದೆಂದೂ ಕಾಣದಂತಹ ರಗಡ್ ಹಾಗೂ ತೀವ್ರತೆಯಿಂದ ಕೂಡಿರುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಲ್ಕತ್ತಾದ ಹಿನ್ನೆಲೆಯಲ್ಲಿ ನಡೆಯುವ ಕೊಲೆ ರಹಸ್ಯದ ಸುತ್ತ ಈ ಕಥೆ ಸಾಗಲಿದ್ದು, ಕರಿಷ್ಮಾ ಅವರ ನಟನೆ ಮತ್ತು ಪಾತ್ರದ ಗಾಂಭೀರ್ಯತೆ ಸರಣಿಯ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕರಿಷ್ಮಾ ಕಪೂರ್ ಅವರ ಪ್ರಭಾವಶಾಲಿ ನಟನೆ ಮತ್ತು ಸರಣಿಯ ಡಾರ್ಕ್ ಥೀಮ್ ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರವಿಮರ್ಶಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ವೆಬ್ ಸರಣಿಯು ಕರಿಷ್ಮಾ ಕಪೂರ್ ಅವರ ನಟನಾ ವೃತ್ತಿಜೀವನಕ್ಕೆ ಹೊಸ ತಿರುವು ನೀಡುವ ಮುನ್ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular