HomeEntertainmentಎಫ್ 1 ರೇಸರ್ ಲ್ಯಾಂಡೋ ನೊರಿಸ್ ಜೊತೆ ಬಾಲಿವುಡ್ ನಟಿ ಕರೀನಾ ಕಪೂರ್ ಮೋಜಿನ ಸಂಭಾಷಣೆ!

ಎಫ್ 1 ರೇಸರ್ ಲ್ಯಾಂಡೋ ನೊರಿಸ್ ಜೊತೆ ಬಾಲಿವುಡ್ ನಟಿ ಕರೀನಾ ಕಪೂರ್ ಮೋಜಿನ ಸಂಭಾಷಣೆ!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ಫಾರ್ಮುಲಾ 1 ಖ್ಯಾತ ರೇಸಿಂಗ್ ಪಟು ಲ್ಯಾಂಡೋ ನೊರಿಸ್ ಅವರ ಅಪರೂಪದ ಹಾಗೂ ತಮಾಷೆಯ ಸಂಭಾಷಣೆ ಸಿಂಗಾಪುರ ಗ್ರಾಂಡ್ ಪ್ರಿಕ್ಸ್ ರೇಸ್ ಅಂಗಳದಲ್ಲಿ ನಡೆದಿದೆ. ಗೂಗಲ್ ಇಂಡಿಯಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಇಬ್ಬರ ಮೋಜಿನ ಮಾತುಕತೆಯ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಸಂಭಾಷಣೆಯ ಆರಂಭದಲ್ಲೇ ಕರೀನಾ ಕಪೂರ್, ತಮ್ಮ ಪತಿ ಸೈಫ್ ಅಲಿ ಖಾನ್ 19 ವರ್ಷಗಳ ಹಿಂದೆ ರೇಸಿಂಗ್ ಚಾಂಪಿಯನ್‌ಷಿಪ್ ಗೆದ್ದಿದ್ದರು ಎಂದು ತಮಾಷೆಯಾಗಿ ಹೇಳಿದರು. 2007 ರಲ್ಲಿ ತೆರೆಕಂಡ ‘ತಾರಾ ರಮ್ ಪಮ್’ ಸಿನಿಮಾದಲ್ಲಿ ಸೈಫ್ ಪೈಲಟ್ ಹಾಗೂ ರೇಸರ್ ಪಾತ್ರವನ್ನು ನೆನಪಿಸಿಕೊಂಡು ಕರೀನಾ ನೀಡಿದ ಈ ಹೇಳಿಕೆಗೆ ನಕ್ಕ ಲ್ಯಾಂಡೋ ನೊರಿಸ್, ಹಾಗಿದ್ದರೆ ನಾವಿಬ್ಬರೂ ಒಂದೇ ಎಂದು ಚಮತ್ಕಾರವಾಗಿ ಹಾಸ್ಯ ಚಟಾಕಿ ಹಾರಿಸಿದರು.

ಈ ವಿಶೇಷ ಭೇಟಿಯ ವೇಳೆ ಕರೀನಾ, ಲ್ಯಾಂಡೋ ಅವರಿಗೆ ಮ್ಯಾಕ್ಲಾರೆನ್ ಎಫ್ 1 ರೇಸಿಂಗ್ ಸಾಧನೆಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ಅಷ್ಟೇ ಅಲ್ಲದೆ, ಅವರಿಗೆ ಭಾರತೀಯ ಶೈಲಿಯ ಮಸಾಲ ಚಾಯ್ ಸವಿಯಲು ನೀಡಿ, ನಮ್ಮ ದೇಶದ ಕೆಲವು ಸಾಮಾನ್ಯ ಸನ್ನೆಗಳು ಮತ್ತು ಸಂಕೇತಗಳನ್ನು ಊಹಿಸುವಂತೆ ಸವಾಲು ಹಾಕಿದರು. ಇದೇ ವೇಳೆ ಮ್ಯಾಕ್ಲಾರೆನ್ ಫಾರ್ಮುಲಾ 1 ತಂಡವು ಕರೀನಾ ಅವರನ್ನು ತಮ್ಮ ‘ಪಪಾಯ ಫ್ಯಾಮಿಲಿ’ ಎಂಬ ಜಾಗತಿಕ ಅಭಿಮಾನಿ ಬಳಗಕ್ಕೆ ಅಧಿಕೃತವಾಗಿ ಸ್ವಾಗತಿಸಿದೆ. ಕರೀನಾ ಕೂಡ ರೇಸಿಂಗ್ ಟ್ರ್ಯಾಕ್‌ನಿಂದ ತೆಗೆದ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸೆಪ್ಟೆಂಬರ್ 18 ರಂದು ಬಿಡುಗಡೆಯಾದ ಮೇಘನಾ ಗುಲ್ಜಾರ್ ನಿರ್ದೇಶನದ ‘ದಾಯರಾ’ ಸಿನಿಮಾದಲ್ಲಿ ನಟಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular