HomeKarnatakaBIG NEWS: ಕರವೇ ಪ್ರತಿಭಟನೆ; 10 FIR ದಾಖಲು, 53 ಕಾರ್ಯಕರ್ತರು ಅರೆಸ್ಟ್

BIG NEWS: ಕರವೇ ಪ್ರತಿಭಟನೆ; 10 FIR ದಾಖಲು, 53 ಕಾರ್ಯಕರ್ತರು ಅರೆಸ್ಟ್

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ಡಿ.27ರಂದು ಕರವೇ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ 10 ಎಫ್ ಐ ಆರ್ ಗಳು ದಾಖಲಾಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮತನಾಡಿದ ಕಮಿಷ್ನರ್ ಬಿ.ದಯಾನಂದ್, ಕರವೇ ನಾರಾಯಣಗೌಡ ಸೇರಿದಂತೆ 53 ಜನರನ್ನು ಬಂಧಿಸಲಾಗಿದೆ. ಒಟ್ಟು 10 ಎಫ್ ಐ ಆರ್ ದಾಖಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರೂ ಕೂಡ ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು. ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಕಟೆಚ್ಚರ ವಹಿಸಲಾಗಿದ್ದು, ಡ್ರಂಕ್ & ಡ್ರೈವ್ ಚಕ್ ಮಾಡಲಾಗುವುದು. ನಗರದಾದ್ಯಂತ 400 ಸಿಸಿಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular