HomeEntertainmentಲೈವ್ ಶೋನಲ್ಲಿ ಗಾಯಕನ ಮೇಲೆ ಜಾಕೆಟ್ ಎಸೆದ ಅಭಿಮಾನಿ: ವೇದಿಕೆಯಲ್ಲೇ ಗರಂ ಆದ ಕರನ್ ಔಜ್ಲಾ

ಲೈವ್ ಶೋನಲ್ಲಿ ಗಾಯಕನ ಮೇಲೆ ಜಾಕೆಟ್ ಎಸೆದ ಅಭಿಮಾನಿ: ವೇದಿಕೆಯಲ್ಲೇ ಗರಂ ಆದ ಕರನ್ ಔಜ್ಲಾ

ಖ್ಯಾತ ಪಂಜಾಬಿ ಗಾಯಕ ಕರನ್ ಔಜ್ಲಾ ಅವರ ಲೈವ್ ಸಂಗೀತ ಕಾರ್ಯಕ್ರಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ವೇದಿಕೆ ಮೇಲಿದ್ದ ಗಾಯಕನತ್ತ ಅಭಿಮಾನಿಯೊಬ್ಬ ಜಾಕೆಟ್ ಎಸೆದು ಆಕ್ರೋಶಕ್ಕೆ ಕಾರಣವಾಗಿದ್ದಾನೆ. ಪ್ರಸ್ತುತ ತಮ್ಮ ‘ಪಿ-ಪಾಪ್ ಕಲ್ಚರ್ ಟೂರ್’ ಅಂಗವಾಗಿ ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಸಂಗೀತ ಕಾರ್ಯಕ್ರಮ ಜೋರಾಗಿ ನಡೆಯುತ್ತಿದ್ದಾಗ ಪ್ರೇಕ್ಷಕರ ಸಾಲಿನಿಂದ ಇದ್ದಕ್ಕಿದ್ದಂತೆ ಜಾಕೆಟ್ ತೂರಿ ಬಂದಿದೆ. ಇದರಿಂದ ತೀವ್ರ ಕೋಪಗೊಂಡ ಕರನ್ ಔಜ್ಲಾ, ಹಾಡುವುದನ್ನು ತಕ್ಷಣವೇ ನಿಲ್ಲಿಸಿ ಪ್ರೇಕ್ಷಕರನ್ನು ಪ್ರಶ್ನಿಸಿದ್ದಾರೆ. ಪಂಜಾಬಿಯಲ್ಲಿ ಮಾತನಾಡುತ್ತಾ, ಜಾಕೆಟ್ ಎಸೆದ ವ್ಯಕ್ತಿ ಯಾರೆಂದು ಪತ್ತೆಹಚ್ಚುವಂತೆ ಕೇಳಿಕೊಂಡಿದ್ದಾರೆ. ನಿನಗೆ ನಿಜಕ್ಕೂ ಧೈರ್ಯವಿದ್ದರೆ ಎದುರಿಗೆ ಬಂದು ನಿಲ್ಲು ಎಂದು ಗರಂ ಆಗಿ ಸವಾಲು ಹಾಕಿದ್ದಾರೆ.

ಬಳಿಕ ಜಾಕೆಟ್ ಎಸೆದ ಅಭಿಮಾನಿಯನ್ನು ಗುರುತಿಸಿದ ಗಾಯಕ, ನಿನಗೇನಾದರೂ ತಲೆ ಕೆಟ್ಟಿದೆಯಾ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ತಮ್ಮ ಕೋಪವನ್ನು ನಿಯಂತ್ರಿಸಿಕೊಂಡ ಕರನ್ ಔಜ್ಲಾ, ಪ್ರೀತಿಯಿಂದಲೇ ಆತನಿಗೆ ಬುದ್ಧಿ ಹೇಳಿದ್ದಾರೆ. ‘ನನ್ನ ಸಮಯ ಹಾಳುಮಾಡಬೇಡ, ಈ ರೀತಿ ಮಾಡಬೇಡ ಮಾರಾಯಾ. ನಿನಗೆ ಏನು ಬೇಕು ಹೇಳು, ಆ ಜಾಕೆಟ್ ಇಲ್ಲಿ ಕೊಡು, ನಾನು ಆಟೋಗ್ರಾಫ್ ಹಾಕಿಕೊಡುತ್ತೇನೆ’ ಎಂದು ವಾತಾವರಣವನ್ನು ತಿಳಿಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರನ್ ಔಜ್ಲಾ ಅವರ ಈ ಹಠಾತ್ ಕೋಪ ಹಾಗೂ ತದನಂತರ ಅಭಿಮಾನಿಯನ್ನು ಸಮಾಧಾನಪಡಿಸಿದ ವೀಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅವರು ಮುಂದಿನ ಪ್ರದರ್ಶನಗಳನ್ನು ಮೆಲ್ಬೋರ್ನ್ ನಗರದಲ್ಲಿ ನೀಡಲಿದ್ದಾರೆ.

https://www.instagram.com/reel/DcHuZG4T14i

https://www.instagram.com/reel/DcGn3ILuqhG

https://www.instagram.com/reel/DcG7d3Zz9Jf

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular