BIG NEWS: ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ ಮತ್ತೆ ಗುಂಡಿನ ದಾಳಿ

ಮುಂಬೈ: ಖ್ಯಾತ ಕಾಮಿಡಿಯನ್, ಉದ್ಯಮಿ ಕಪಿಲ್ ಶರ್ಮಾ ಒಡೆತನದ ರೆಸ್ಟೊರೆಂಟ್ ಮೇಲೆ ದುಷ್ಕರ್ಮಿಗಳು ಮತ್ತೆ ಗುಂಡಿನದಾಳಿ ನಡೆಸಿದ್ದಾರೆ.

ಕೆನಡಾದ ಸರ್ರ‍ೆಯ ನ್ಯೂ ಟೌನ್ ಏರಿಯಾದಲ್ಲಿ ಕಪಿಲ್ ಶರ್ಮಾ ಮಾಲೀಕತ್ವದ ರೆಸ್ಟೊರೆಂಟ್ ಇದ್ದು, ಗುರುವಾರ ತಡರಾತ್ರಿ ಈ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ ನಡೆದಿದೆ. ಅಲ್ಲಿನ ಕಾಲಮಾನ 3:45ರ ಸುಮಾರಿಗೆ ಈ ಘಟನೆ ನಡೆದಿದೆ.

ರೆಸ್ಟೊರೆಂಟ್ ಮೇಲೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ರೆಸ್ಟೋರೆಂಟ್ ಗಾಜಿಗೆ ಹಾನಿಯಾಗಿದೆ. ಲಾರೆನ್ಸ್ ಭಿಷ್ಣೋಯಿ ಗ್ಯಾಂಗ್ ಗೆ ಸೇರಿದ ಕುಲ್ವೀರ್ ಸಿಧು ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಗುಡಿನ ದಾಳಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲಿನ ಮೂರನೆ ದಾಳಿ ಇದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read