‘ಕಾಂತಾರ 2’: ರಿಷಬ್ ಶೆಟ್ಟಿಯ ಆಕ್ಷನ್ ಥ್ರಿಲ್ಲರ್ ಪ್ರೀಕ್ವೆಲ್ ನಲ್ಲಿ ಊರ್ವಶಿ ರೌಟೇಲಾ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರವು 53 ದಿನಗಳಲ್ಲಿ 400 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ ವಿಶ್ವಾದ್ಯಂತ ಕನ್ನಡದ ಅತಿದೊಡ್ಡ ಬ್ಲಾಕ್ಬಸ್ಟರ್ ಆಗಿದೆ.

ಈ ಚಿತ್ರ 2022 ರ ದಕ್ಷಿಣದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ಸುಮಾರು 15 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ, ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ PAN(ರಾಷ್ಟ್ರದಾದ್ಯಂತ ಜನಪ್ರಿಯ) ಭಾರತದ ಹಿಟ್ ಆಯಿತು.

‘ಕಾಂತಾರ’ ಭಾಷೆಯ ಅಡೆತಡೆಗಳನ್ನು ಮುರಿದು ಹಿಂದಿ ಮಾತನಾಡುವ ಬೆಲ್ಟ್‌ ನಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇತ್ತೀಚೆಗೆ ರಿಷಬ್ ಅವರು ‘ಕಾಂತಾರ 2’ ರ ಕೆಲಸ ಪ್ರಾರಂಭಿಸಿದ ಬಗ್ಗೆ ಮಾಹಿತಿ ನೀಡಿದ್ದರು.. ಈಗ, ನಟಿ ಊರ್ವಶಿ ರೌಟೇಲಾ ಅವರು ‘ಕಾಂತಾರ 2’ ಕನ್ನಡದ ಆಕ್ಷನ್-ಥ್ರಿಲ್ಲರ್‌ನ ಭಾಗವಾಗಿರುವುದಾಗಿ ಖಚಿತಪಡಿಸಿದ್ದಾರೆ.

ಊರ್ವಶಿ ರೌತೇಲಾ ‘ಕಾಂತಾರ’ ಪ್ರೀಕ್ವೆಲ್‌ನ ಭಾಗವಾಗಲಿದ್ದಾರೆ. ಊರ್ವಶಿ ತನ್ನ ಇನ್‌ ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ನಟ-ನಿರ್ದೇಶಕನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘ಕಾಂತಾರ’ದಲ್ಲಿ ರಿಷಬ್ ಜೊತೆಗೆ, ಸಪ್ತಮಿ ಗೌಡ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಸಹ ನಟಿಸಿದ್ದಾರೆ, ಈಗ ಊರ್ವಶಿ ಕೂಡ ಜೊತೆಯಾಗಲಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read