HomeIndiaBIG NEWS: ಕಾನ್ಪುರದಲ್ಲಿ ಮತ್ತೆ ರೈಲು ಹಳಿ ತಪ್ಪಿಸಲು ಸಂಚು: ರೈಲು ಹಳಿಗಳ ಮೇಲೆ ಸಿಲಿಂಡರ್...

BIG NEWS: ಕಾನ್ಪುರದಲ್ಲಿ ಮತ್ತೆ ರೈಲು ಹಳಿ ತಪ್ಪಿಸಲು ಸಂಚು: ರೈಲು ಹಳಿಗಳ ಮೇಲೆ ಸಿಲಿಂಡರ್ ಪತ್ತೆ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮತ್ತೆ ರೈಲು ಹಳಿ ತಪ್ಪಿಸುವ ಸಂಚು ನಡೆದಿದ್ದು, ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.

ಕಾನ್ಪುರದಿಂದ ಫತೇಪುರ್ ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು. ಲೋಕೋ ಪೈಲೆಟ್ ಹಾಗೂ ಸಹಾಯಕ ಲೋಕೋ ಪೈಲೆಟ್ ತುರ್ತು ಬ್ರೇಕ್ ಹಾಕಿ ಗೂಡ್ಸ್ ರೈಲನ್ನು ನಿಲ್ಲಿಸಿದ್ದಾರೆ.

ಇದರಿಂದಾಗಿ ಸಂಭವಿಸಲಿದ್ದ ಅನಾಹುತ ಕ್ಷಣಾರ್ಧದಲ್ಲಿ ತಪ್ಪಿದೆ. ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಪರಿಶೀಲನೆ ನಡೆಸಿದಾಗ ರೈಲ್ವೆ ಹಳಿ ಮೇಲೆ ಖಾಲಿ 5 ಕೆಜಿ ಸಿಲಿಂಡರ್ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಕೆಲ ವಾರಗಳ ಹಿಂದೆಯೂ ಕಾನ್ಪುರದಲ್ಲಿ ರೈಲು ಹಳಿಗಳ ಮೇಲೆ ಸಿಲಿಂಡರ್ ಪತ್ತೆಯಾಗಿತ್ತು. ಇದೀಗ ಮತ್ತೆ ಅಂತದ್ದೇ ಘಟನೆ ನಡೆದಿದ್ದು, ಕೆಲವೇ ದಿನಗಳಲ್ಲಿ ಎರಡು ಬಾರಿ ರೈಲು ಅಪಘಾತವನ್ನು ತಪ್ಪಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular