ತನ್ನ ಬಾಯ್‌ಫ್ರೆಂಡ್ ತಂದೆಯೊಂದಿಗೆ ನಾಪತ್ತೆಯಾಗಿ‌ದ್ದ ಯುವತಿ; ಮರಳಿ ಕರೆತಂದ ಉ.ಪ್ರ ಪೊಲೀಸ್

ತನ್ನ ಬಾಯ್‌ಫ್ರೆಂಡ್‌ನ ತಂದೆಯೊಂದಿಗೆ ಪರಾರಿಯಾಗಿದ್ದ ಕಾನ್ಪುರದ ಯುವತಿಯೊಬ್ಬಳನ್ನು ಪತ್ತೆ ಮಾಡುವಲ್ಲಿ ಉತ್ತರ ಪ್ರದೇಶ ಪೊಲೀಸರು ಸಫಲರಾಗಿದ್ದಾರೆ.

ಮಾರ್ಚ್ 2022ರಲ್ಲಿ ತನ್ನ ಬಾಯ್‌ಫ್ರೆಂಡ್ ತಂದೆ ಕಮ್ಲೇಶ್ ಜೊತೆಗೆ 20 ವರ್ಷದ ಈ ಯುವತಿ ನಾಪತ್ತೆಯಾಗಿದ್ದಳು. ಕಮ್ಲೇಶ್ ಪುತ್ರ ಅಮಿತ್‌ ಈ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಅಮಿತ್‌ನ ಕುಟುಂಬ ಈ ಸಂಬಂಧ ನಗರದ ಚಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಒಂದು ವರ್ಷದ ಸುದೀರ್ಘ ಶೋಧದ ಬಳಿಕ, ಕಮ್ಲೇಶ್ ಹಾಗೂ ಯುವತಿಯನ್ನು ದೆಹಲಿಯಲ್ಲಿ ಪತ್ತೆ ಮಾಡಿ ಅವರನ್ನು ಮರಳಿ ಕರೆತಂದಿದ್ದಾರೆ. ಈ ಇಬ್ಬರೂ ಒಟ್ಟಿಗೇ ವಾಸಿಸುತ್ತಿದ್ದು, ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಮ್ಲೇಶ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದು, ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read