ನವೆಂಬರ್ 24 ಹಾಗೂ 25ರಂದು ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಕನ್ನಡಿಗ ಶ್ರೇಯಸ್ ಗೋಪಾಲ್ ಅವರನ್ನು 30 ಲಕ್ಷ ರೂ. ಗಳಿಗೆ ಖರೀದಿಸಿದೆ. ಕರ್ನಾಟಕದ ಉತ್ತಮ ಆಲ್ ರೌಂಡರ್ ಆಗಿರುವ ಇವರು ಕೇವಲ ಬೌಲಿಂಗ್ ಮಾತ್ರವಲ್ಲದೆ ಸ್ಪೋಟಕ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದೆಡೆ ಆರ್ ಅಶ್ವಿನ್, ಸ್ಯಾಮ್ ಕರನ್ ಸೇರ್ಪಡೆಯಾಗಿದ್ದು, ಆನೆ ಬಲ ಬಂದಂತಾಗಿದೆ. ಆರ್ ಅಶ್ವಿನ್ ತಮ್ಮ ತವರು ನೆಲದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದು, ತಮ್ಮ ತಂಡಕ್ಕೆ ಮರಳಿರುವ ಸಂತಸದಲ್ಲಿದ್ದಾರೆ.