BIG BREAKING: ಜಾಲಿವುಡ್ ಸ್ಟುಡಿಯೋಗೆ ಬೀಗ: ಎರಡೇ ವಾರಕ್ಕೆ ಬಂದ್ ಆಯ್ತು ಬಿಗ್ ಬಾಸ್ ಹೌಸ್!

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಜನ್-12ಕ್ಕೆ ಸಂಕಷ್ಟ ಎದುರಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾದ ಎರಡನೇ ವಾರಕ್ಕೆ ಸ್ ಬಿಗ್ ಬಾಸ್ ಹೌಸ್ ಬಂದ್ ಆಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಹಾಕಲಾಗಿದೆ.

ರಾಮನಗರದ ಬಿಡದಿ ಬಳಿಯ 35 ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ಪ್ರತ್ಯೇಕ ಸೆಟ್ ಗಳನ್ನು ಹಾಕಿ ಕನ್ನಡ ಬಿಗ್ ಬಾಸ್ ಸೀಜನ್ -12ನ್ನು ನಡೆಸಲಾಗುತ್ತಿತ್ತು. ಆದರೆ ಬಿಗ್ ಬಾಸ್ ಶೋ ಹಾಗೂ ಸೆಟ್ ಗಳಲ್ಲಿ ಪರಿಸರ ನಿಯಮ ಉಲ್ಲಂಘನೆ ಮಾಡಲಾಗಿದೆ. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘನೆ ಮಾಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು.

ಅಲ್ಲದೇ ಜಾಲಿವುಡ್ ಸ್ಟುಡಿಯೋವಾಗಲಿ, ಬಿಗ್ ಬಾಸ್ ಶೋ ತಂಡವಾಗಲಿ ಶೋ ನಡೆಸಲು ಇಲ್ಲಿ ಪೊಲೀಸರಿಂದ ಯಾವುದೇ ಅನುಮತಿ ಪಡೆದಿಲ್ಲ. ಅನಧಿಕೃತವಾಗಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಶೋ ಸ್ಥಗಿತಗೊಳಿಸುವಂತೆ ಪೊಲೀಸರು ಕೂಡ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನೀಡಲೆಂದು ಜಾಲಿವುಡ್ ಸ್ಟುಡಿಯೋ ಸ್ಥಳಕ್ಕೆ ತೆರಳಿದಾಗ ಜಾಲಿವುಡ್ ಸ್ಟುಡಿಯೋಸ್ ಆಗಲಿ, ಬಿಗ್ ಬಾಸ್ ಶೋ ಟೀಂ ಆಗಲಿ ನೋಟಿಸ್ ತೆಗೆದುಕೊಳ್ಳಲು ಹಿಂದೇಟು ಹಾಕಿವೆ. ಈ ಹಿನ್ನೆಲೆಯಲ್ಲಿ ಬಿಡದಿ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಉದ್ರೆ ಹಾಕಿದ್ದಾರೆ, ಬಿಗ್ ಬಾಸ್ ಶೋ ಹೌಸ್ ಗೂ ಬೀಗ ಜಡಿಯಲಾಗಿದ್ದು, ಬಿಗ್ ಬಾಸ್ ಶೋ ಬಂದ್ ಆಗಿದೆ.

ಬಿಗ್ ಬಾಸ್ ಸ್ಪರ್ಧಿಗಳನ್ನು ಸ್ಥಳದಿಂದ ಹೊರಕಳುಹಿಸಲಾಗಿದೆ. ಅಧಿಅಕರಿಗಳ ಸಮ್ಮುಖದಲ್ಲಿಯೇ ಜಾಲಿವುಡ್ ಸ್ಟುಡಿಯೋ ಗೆ ಬೀಗ ಹಾಕಲಾಗಿದ್ದು, ಸದ್ಯ ಬಿಗ್ ಬಾಸ್ ಕಾರ್ಯಕ್ರಮ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read