ತಮಿಳುನಾಡಿನ ಖಾಸಗಿ ಬಸ್ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆ ಹೊಂದಿದ್ದ ಶರ್ಮಿಳಾ ಇತ್ತೀಚೆಗೆ ತಮ್ಮ ಬಸ್ ನಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಸಂಚಾರ ಮಾಡಿದ ವೇಳೆ ಕಂಡಕ್ಟರ್ ಹಾಗೂ ಬಸ್ ಆಡಳಿತ ಮಂಡಳಿಯೊಂದಿಗೆ ಉಂಟಾದ ತಿಕ್ಕಾಟದಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಕನಿಮೋಳಿ ಟಿಕೆಟ್ ಪಡೆದು ಪ್ರಯಾಣಿಸಿದರೂ ಸಹ ಮಹಿಳಾ ಕಂಡಕ್ಟರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಶರ್ಮಿಳಾ ದೂರಿದ್ದಾರಲ್ಲದೆ ಆಡಳಿತ ಮಂಡಳಿ, ಪ್ರಚಾರದ ಸಲುವಾಗಿ ಪ್ರಮುಖ ವ್ಯಕ್ತಿಗಳನ್ನು ಬಸ್ ನಲ್ಲಿ ಸಂಚರಿಸಲು ಆಹ್ವಾನಿಸಲಾಗಿತ್ತು ಎಂಬ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಶರ್ಮಿಳಾ ಕೆಲಸ ತೊರೆದಿದ್ದರು.
ಇದೀಗ ತಮಿಳುನಾಡಿನ ‘ಮಕ್ಕಳ್ ನೀದಿ ಮೈಯ್ಯಂ’ ಮುಖ್ಯಸ್ಥ ಖ್ಯಾತ ನಟ ಕಮಲಹಾಸನ್ ತಮ್ಮ ಕಮಲ್ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಶರ್ಮಿಳಾ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ಕಾರು ಬಳಸಿಕೊಂಡು ಅವರು ಯಶಸ್ವಿ ಉದ್ಯಮಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
https://twitter.com/sidhuwrites/status/1673228924724322309?ref_src=twsrc%5Etfw%7Ctwcamp%5Etweetembed%7Ctwterm%5E1673228924724322309%7Ctwgr%5E1849fa2940cb795618fc52a3177020f2173af742%7Ctwcon%5Es1_&ref_url=https%3A%2F%2Fwww.ndtv.com%2Findia-news%2Fwatch-kamal-haasan-gifts-car-to-woman-bus-driver-who-had-quit-job-amid-row-4152996