HomeLatest Newsಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಕೇವಲ ತಲ್ವಾರ್ ತೋರಿಸಿದರೆ ಸಾಕಿತ್ತು: RSS ಮುಖಂಡ ಕಲ್ಕಡ ಪ್ರಭಾಕರ್...

ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಕೇವಲ ತಲ್ವಾರ್ ತೋರಿಸಿದರೆ ಸಾಕಿತ್ತು: RSS ಮುಖಂಡ ಕಲ್ಕಡ ಪ್ರಭಾಕರ್ ಭಟ್

ಮಂಗಳೂರು: ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದರೆ ಸಾಕಿತ್ತು ಕಥೆಯೇ ಬೇರೆ ಆಗುತ್ತಿತ್ತು ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗ್ ನಲ್ಲಿ ಚೂರು ಇಟ್ಟುಕೊಳ್ಳಿ ಎಂದು ಕರೆ ನೀಡಿದರು. ವ್ಯಾನಿಟಿ ಬ್ಯಾಗ್ ನಲ್ಲಿ ಪೌಡರ್, ಬಾಚಣಿಗೆ ಜೊತೆ ಆರು ಇಂಚಿನ ಚಾಕು ಇಟ್ಟುಕೊಳ್ಳಿ. ಅದಕ್ಕೆ ಯಾವುದೇ ಲೈಸನ್ಸ್ ಬೇಕಾಗಿಲ್ಲ ಎಂದರು.

ಸಂಜೆ ಮೇಲೆ ಓಡಾಡಿದರೆ ನಿಮ್ಮ ಮೇಲೆ ಖಂಡಿತಾ ಆಕ್ರಮ ಮಾಡ್ತಾರೆ. ಆಕ್ರಮ ಮಾಡಬೇಡಿ ಎಂದು ಬೇಡಿಕೊಂಡರೆ ನಿಮ್ಮ ಕಥೆ ಮುಗೀತು. ಅದರ ಬದಲು ಚೂರಿ ತೀರಿಸಿ ಬಾ ಎಂದು ಸವಾಲು ಹಾಕಿದರೆ ಸಾಕು ಹೆದರಿ ಓಡಿ ಹೋಗ್ತಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular