HomeKarnatakaBREAKING NEWS: ವಕೀಲನ ಹತ್ಯೆ ಪ್ರಕರಣ; ಪತಿ-ಪತ್ನಿ ಸೇರಿ ಐವರು ಆರೋಪಿಗಳು ಅರೆಸ್ಟ್

BREAKING NEWS: ವಕೀಲನ ಹತ್ಯೆ ಪ್ರಕರಣ; ಪತಿ-ಪತ್ನಿ ಸೇರಿ ಐವರು ಆರೋಪಿಗಳು ಅರೆಸ್ಟ್

ಕಲಬುರ್ಗಿ: ಕಲಬುರ್ಗಿಯಲ್ಲಿ ಹಾಡ ಹಗಲೇ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ವಕೀಲ ಈರಣ್ಣಗೌಡ ಪಾಟೀಲ್ ಹತ್ಯೆ ಪ್ರಕರಣ ಸಂಬಂಧ ಗುಲಬುರ್ಗ ವಿವಿ ಪೊಲೀಸರು ಪ್ರಮುಖ ಆರೋಪಿಗಳಾದ ನೀಲಕಂಠ ಹಾಗೂ ಪತ್ನಿ ಸಿದ್ದಮ್ಮ ಅವರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಕೀಲನ ಕೊಲೆಗೂ ಮುನ್ನ ಗಂಡ-ಹೆಂಡತಿ ಇಬ್ಬರೂ ಪಕ್ಕಾ ಪ್ಲಾನ್ ಮಾಡಿದ್ದರು. ಹತ್ಯೆ ದಿನ ದಂಪತಿ ಕಾರು ಪೂಜೆಗೆಂದು ಗಾಣಗಾಪುರ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿದ್ದಾಗಲೇ ವಕೀಲನ ಕೊಲೆ ಸುದ್ದಿ ತಿಳಿದಿತ್ತು. ಇದರಿಂದ ದಂಪತಿ ಖುಷಿಪಟ್ಟಿದ್ದರು.

ಮನೆಗೆ ವಾಪಾಸ್ ಆದ ಬಳಿಕ ಸಿದ್ದಮ್ಮ ಕೊಲೆ ಮಾಡಿದ್ದ ಆರೋಪಿಗಳಿಗೆ ಹಣ ನೀಡಿದ್ದರು. ವಕೀಲನ ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular