HomeKarnatakaBIG NEWS: ಕುಡಿದ ಮತ್ತಿನಲ್ಲಿ ನೀರಿಗೆ ಹಾರಿ ಯುವಕ ಸಾವು

BIG NEWS: ಕುಡಿದ ಮತ್ತಿನಲ್ಲಿ ನೀರಿಗೆ ಹಾರಿ ಯುವಕ ಸಾವು

ಕಲಬುರ್ಗಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಕಂಠಪೂರ್ತಿ ಕುಡಿದು ಅಮಲಿನಲ್ಲಿ ನೀರಿಗೆ ಹಾರಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಬ್ರಿಜ್ ಕಂ ಬ್ಯಾರೇಜ್ ನಲ್ಲಿ ನಡೆದಿದೆ.

ಹೈದರಾಬಾದ್ ಮೂಲದ 25 ವರ್ಷದ ಯುವಕ ಸಾಜಿದ್ ಮೃತ ವ್ಯಕ್ತಿ. ಸ್ನೇಹಿತರೊಂದಿಗೆ ಚೇಂಗಟಾದ ದರ್ಗಾಕ್ಕೆ ಬಂದಿದ್ದ. ದರ್ಗಾ ದರ್ಶನ ಬಳಿಕ ಮದ್ಯ ಸೇವಿಸಿದ್ದ. ಕುಡಿದ ಮತ್ತಿನಲ್ಲಿ ಬ್ರಿಜ್ ಕಂ ಬ್ಯಾರೇಜ್ ನಲ್ಲಿ ಈಜಲು ತೆರಳಿದ್ದ.

ಈಜುವಾಗಲೇ ನೀರಿನಲ್ಲಿ  ಮುಳುಗಿ ಸಾಜಿದ್ ಮೃತಪಟ್ಟಿದ್ದಾನೆ. ಸಾಜಿದ್ ಮುಳುಗುತ್ತಿರುವ ದೃಶ್ಯವನ್ನು ಆತನ ಸ್ನೇಹಿತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular