BIG NEWS: ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ‘ಮಜರ್’ ಪತ್ತೆ: ಅನಧಿಕೃತವಾಗಿ ದರ್ಗಾ ಮಾದರಿ ಕಟ್ಟಡ ನಿರ್ಮಾಣ

ಕಲಬುರಗಿ: ಕಲಬುರ್ಗಿ ವಿಶ್ವ ವಿದ್ಯಾಲಯ ಕ್ಯಾಂಪಸ್ ನಲ್ಲಿ ಮಜರ್ ಪತ್ತೆಯಾಗಿದೆ. ರಾತ್ರೋ ರಾತ್ರಿ ಅನಧಿಕೃತವಾಗಿ ದರ್ಗಾ ಮಾದರಿಯ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಕೇಂದ್ರೀಯ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಇದು ಮೂರನೇ ದರ್ಗಾ ಮಾದರಿಯ ಅನಧಿಕೃತ ಕಟ್ಟಡವಾಗಿದೆ. ಈ ಬಗ್ಗೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಬೆಳಗಾಗುವಷ್ಟರಲ್ಲಿ ವಿಶ್ವವಿದ್ಯಾಲಯದ ಜಾಗದಲ್ಲಿ ಕ್ಯಾಂಪಸ್ ಒಳಗೆ ದರ್ಗಾ ಮಾದರಿಯ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read