ಕಲಬುರಗಿ: ಎಣ್ಣೆ ಪಾರ್ಟಿ ವೇಳೆ ನಡೆದ ಗಲಾಟೆ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಚಾಂದ್ ಸಾಬ್ ಕೊಲೆಯಾದ ದುರ್ದೈವಿ. ಚಾಂದ್ ಸಾಬ್ ಮನೆಯಲ್ಲಿ ತಡರಾತ್ರಿವರೆಗೆ ಎಣ್ಣೆ ಪಾರ್ಟಿ ನಡೆದಿತ್ತು. ಪರಿಚಿತರೇ ಸೇರಿಕೊಂಡು ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಜಗಳ ಶುವಾಗಿದೆ.
ಚಾಂದ್ ಸಾಬ್ ನನ್ನು ಬೆತ್ತಲೆಗೊಳಿಸಿ ದೊಣ್ಣೆಯಿಂದ ಹೊಡೆದು ಹತ್ಯೆಮಾಡಲಾಗಿದೆ. ಚಾಂದ್ ಸಾಬ್ ಪತ್ನಿ ದೆಹಲಿಯಲ್ಲಿದ್ದು, ಕೊಲೆ ವಿಚಾರ ಗೊತ್ತಾಗುತ್ತಿದ್ದಂತೆ ಕಲಬುರಗಿಗೆ ಆಗಮಿಸುತ್ತಿದ್ದಾರೆ.
ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.