HomeKarnatakaಮಾಹಿತಿ ನೀಡದ ಕಲಬುರಗಿ ಜಿ.ಪಂ. ಉಪ ಕಾರ್ಯದರ್ಶಿ ಸೇರಿ 18 ಅಧಿಕಾರಿಗಳಿಗೆ ದಂಡ

ಮಾಹಿತಿ ನೀಡದ ಕಲಬುರಗಿ ಜಿ.ಪಂ. ಉಪ ಕಾರ್ಯದರ್ಶಿ ಸೇರಿ 18 ಅಧಿಕಾರಿಗಳಿಗೆ ದಂಡ

ಕೊಪ್ಪಳ: ಸಕಾಲಕ್ಕೆ ಮಾಹಿತಿ ನೀಡದ ಕಲಬುರಗಿ ಜಿ.ಪಂ. ಉಪ ಕಾರ್ಯದರ್ಶಿ ಸೇರಿ 18 ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ.

ಸಕಾಲಕ್ಕೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸುವುದು ಸೇರಿದಂತೆ ವಿಚಾರಣೆಗೆ ಗೈರು ಹಾಜರಾಗಿ ಆಯೋಗದ ನೋಟಿಸ್‌ಗೆ ಸ್ಪಂದನೆ ನೀಡದ ಕಾರಣ ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಹಾಗೂ ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಾನಾ ಅಭಿಯಂತರ ದೇವಣ್ಣ ಕಟ್ಟಿ, ರಾಯಚೂರು ತಾಲೂಕು ಗ್ರೇಡ್- 2 ತಹಸೀಲ್ದಾರ್ ಪರಶುರಾಮ್ ಸೇರಿ ಹಲವು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ ಕಾರ್ಯದರ್ಶಿಗಳಿಗೆ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ ಸಿಂಗ್ ಅವರು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿದ್ದಲ್ಲದೆ, ಮಾಹಿತಿ ನೀಡದ ಕಾರಣ ಕಲಬುದಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿಗೆ 10 ಸಾವಿರ, ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವಣ್ಣ ಕಟ್ಟಿಗೆ 15 ಸಾವಿರ, ರಾಯಚೂರು ತಾಲೂಕು ಗ್ರೇಡ್ 2 ತಹಸೀಲ್ದಾರ್ ಪರಶುರಾಮಗೆ 5 ಸಾವಿರ, ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾ.ಪಂ ಕಾರ್ಯದರ್ಶಿ  ಮಲ್ಲಿಕಾರ್ಜುನಗೆ 5 ಸಾವಿರ, ಸುರುಪುರ ತಾಲೂಕಿನ ಆಲ್ದಾಳ ಗ್ರಾ.ಪಂ. ಕಾರ್ಯದರ್ಶಿ ರಾಜಕುಮಾರ ಸುಬೆದಾರಗೆ 10 ಸಾವಿರ, ಮಟ್ಟಿ ತಾಲೂಕಿನ ಆರೋಲಿ ಗ್ರಾಪಂ ಪಿ.ಡಿ.ಒ. ರಘುನಾಥಗೆ 5 ಸಾವಿರ, ಆಳಂದ ತಾಲೂಕಿನ ಯಲಸಂಗಿ ಗ್ರಾ.ಪಂ ಪಿ.ಡಿ.ಒ. ಜಗದೀಶಗೆ 15 ಸಾವಿರ, ಸುರಪುರ ತಾಲೂಕಿನ ನಗನೂರು ಗ್ರಾಪಂ ಕಾರ್ಯದರ್ಶಿಯಾದ ಮಡಿವಾಳಪ್ಪಗೆ 10 ಸಾವಿರ, ಶಹಪುರ ತಾಲೂಕಿನ ಗೋಗಿ.ಕೆ. ಗ್ರಾ.ಪಂ. ಪಿ.ಡಿ.ಒ.  ಸಿದ್ರಾಮಗೆ 10 ಸಾವಿರ, ಸಂಡೂರು ತಾಲೂಕಿನ ಹೊಸದರೋಜ ಗ್ರಾಪಂ ಕಾರ್ಯದರ್ಶಿ  ಕಲ್ಲಪ್ಪಗೆ 10 ಸಾವಿರ, ಯಾದಗಿರ ತಾಲೂಕಿನ ಸೈದಾಪುರ ಗ್ರಾ.ಪಂ ಪಿ.ಡಿ.ಒ.  ಮುದುಕಪ್ಪಗೆ 10 ಸಾವಿರ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾ.ಪಂ. ಕಾರ್ಯದರ್ಶಿ ಯಂಕನಗೌಡಗೆ 5 ಸಾವಿರ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಾರ್ಯದರ್ಶಿ ಜೋತಿ ರೆಡ್ಡರ್‌ಗೆ 10 ಸಆವಿರ ಕಲಬುರಗಿ ತಾಲೂಕಿನ ಹಾಗಾರಗ ಗ್ರಾ.ಪಂ. ಕಾರ್ಯದರ್ಶಿ ವೇದಾಂಗಗೆ 5 ಸಾವಿರ, ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾ.ಪಂ.ನ ಕಾರ್ಯದರ್ಶಿ  ಭೀಮಣ್ಣಗೆ 10 ಸಾವಿರ, ಯಾದಗಿರ ತಾಲೂಕಿನ ರಾಮ ಸಮುದ್ರ ಗ್ರಾ.ಪಂ. ಕಾರ್ಯದರ್ಶಿ ಗಾಲಿಬಸಾಬ ಗೆ 5 ಸಾವಿರ ಹಾಗೂ ರಾಯಚೂರು ತಾಲೂಕಿನ ಗ್ರೇಡ್-2 ತಹಶೀಲದಾರ ಪರುಶುರಾಮಗೆ 5 ಸಾವಿರ ಸೇರಿ ಒಟ್ಟು 18 ಅಧಿಕಾರಿಗಳಿಗೆ ಏಪ್ರೀಲ್ ತಿಂಗಳಿನಲ್ಲಿ 1 ಲಕ್ಷ 50 ಸಾವಿರ ದಂಡ ವಿಧಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರೀಲ್ ತಿಂಗಳಲ್ಲಿ 564 ಪ್ರಕರಣಗಳು ವಿಚಾರಣೆಗೆ ಕೈಗೆತ್ತಿಕೊಂಡು 229 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾವು ಅಧಿಕಾರ ಸ್ವೀಕರಿಸಿದ ಬಳಿಕ ಒಟ್ಟು 3,084 ಪ್ರಕರಣಗಳು ಕೈಗೆತ್ತಿಕೊಂಡು 88 ದಿನ ವಿಚಾರಣೆ ನಡೆಸಿ 1,308 ಪ್ರಕರಣಗಳು ವಿಲೇವಾರಿ ಮಾಡಿರುವುದಾಗಿ ಆಯುಕ್ತರಾದ ಬಿ.ವೆಂಕಟಸಿಂಗ್ ತಿಳಿಸಿದ್ದಾರೆ.

ಪ್ರಕರಣಗಳ ತ್ವರಿತ ವಿಲೇವಾರಿಗೆ ಅನೂಕೂಲವಾಗಲು ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಅರಿವು ಮುಡಿಸಲು ಈಗಾಗಲೇ ಬಳ್ಳಾರಿ, ಬೀದರ್, ಕಲಬುರಗಿ ಹಾಗೂ ಕೊಪ್ಪಳದಲ್ಲಿ ಕಾರ್ಯಗಾರ ನಡೆಸಿದ್ದು ಈ ತಿಂಗಳ 30 ರಂದು ವಿಜಯನಗರ ಜಿಲ್ಲೆಯಲ್ಲಿ ಕಾರ್ಯಗಾರ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular