HomeLatest NewsBIG NEWS: ಕಬಡ್ಡಿ ಪಂದ್ಯದ ವೇಳೆ ದುರಂತ: ವಿದ್ಯುತ್ ತಂತಿ ತಗುಲಿ ಮೂವರು ಸಾವು

BIG NEWS: ಕಬಡ್ಡಿ ಪಂದ್ಯದ ವೇಳೆ ದುರಂತ: ವಿದ್ಯುತ್ ತಂತಿ ತಗುಲಿ ಮೂವರು ಸಾವು

ರಾಯ್ಪುರ: ಕಬಡ್ಡಿ ಪಂದ್ಯಾವಳಿ ವೇಳೆ ಏಕಾಏಕಿ ಬಿರುಗಾಳಿ ಬೀಸಿದ ಪರಿಣಾಮ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿರುವ ಘಟನೆ ಛಂತ್ತೀಸ್ ಗಢದ ಕೊಂಡಗಾಂವ್ ನಲ್ಲಿ ನಡೆದಿದೆ.

ವಿದ್ಯುತ್ ತಂತಿ ಕಬಡ್ಡಿ ಟೆಂಟ್ ಗೆ ತಗುಲಿ ವಿದ್ಯುತ್ ಪ್ರವಹಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಬಡ್ಡಿ ಆಟಗಾರ ಸತೀಶ್ ನೇತಮ್, ಶ್ಯಾಮಲಾಲ್ ನೇತಮ್, ಸುನಿಲ್ ಶೋರಿ ಮೃತರು. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭಿರವಾಗಿದೆ.

ರಾವಸ್ವಾಹಿ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಬಿರುಗಾಳಿಯಿಂದಾಗಿ ಟೆಂಟ್ ನ ಕಬ್ಬಿಣದ ಕಂಬಕ್ಕೆ 11 ಕೆವಿ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular