HomeKarnatakaBIG NEWS: ಬೇಕಾದ್ರೆ ನಮ್ಮ ಜೊತೆ ಇರಲಿ ಬೇಡವಾದ್ರೆ ಹೋಗಲಿ; ಎಸ್.ಟಿ. ಸೋಮಶೇಖರ್ ಗೆ ಕೆ.ಎಸ್....

BIG NEWS: ಬೇಕಾದ್ರೆ ನಮ್ಮ ಜೊತೆ ಇರಲಿ ಬೇಡವಾದ್ರೆ ಹೋಗಲಿ; ಎಸ್.ಟಿ. ಸೋಮಶೇಖರ್ ಗೆ ಕೆ.ಎಸ್. ಈಶ್ವರಪ್ಪ ತಿರುಗೇಟು

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ಶಾಸಕ ಎಸ್.ಟಿ.ಸೋಮಶೇಖರ್ ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕೇಂದ್ರ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ಇಲ್ಲ. ಎಸ್.ಟಿ.ಸೋಮಶೇಖರ್ ಗೆ ಕೂಡ ವಿನಾಯಿತಿ ಇಲ್ಲ. ಕೇಂದ್ರದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈತ್ರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಬೇಕಾದ್ರೆ ನಮ್ಮ ಜೊತೆ ಇರಲಿ, ಬೇಡವಾದ್ರೆ ಹೋಗಲಿ. ಅವರಿಗೆ ಎಲ್ಲಿ ಖುಷಿ ಇದೆ ಅಲ್ಲಿಗೆ ಹೋಗಲಿ ಎಂದು ಟಾಂಗ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular