HomeKarnatakaBIG NEWS: ಮೋದಿ ಫೋಟೋ ಇಲ್ಲದೇ ಅವರು ಪ್ರಚಾರಕ್ಕೆ ಹೋಗಲಿ; ನನಗೆ ಹೇಳಲು ಅವರು ಯಾರು?...

BIG NEWS: ಮೋದಿ ಫೋಟೋ ಇಲ್ಲದೇ ಅವರು ಪ್ರಚಾರಕ್ಕೆ ಹೋಗಲಿ; ನನಗೆ ಹೇಳಲು ಅವರು ಯಾರು? ಬಿ.ವೈ.ರಾಘವೇಂದ್ರ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಸ್ವರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಡುವೆ ಮೋದಿ ಫೋಟೋ ವಾರ್ ಶುರುವಾಗಿದೆ. ಪ್ರಧಾನಿ ಮೋದಿ ಫೋಟೋ ಇಟ್ಟುಕೊಂಡು ಚುನಾವಣಾ ಪ್ರಚಾರ ಮಾಡಿದ್ದಕ್ಕೆ ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಈಶ್ವರಪ್ಪ ವಿರುದ್ಧ ಬಿಜೆಪಿ ದೂರನ್ನು ದಾಖಲಿಸಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಕೋರ್ಟ್ ಮೊರೆ ಹೋಗಿರುವ ಈಶ್ವರಪ್ಪ, ಇದೀಗ ಮತ್ತೆ ಬಿ.ವೈ.ರಾಘವೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಮೋದಿ ಫೋಟೋ ಹಾಕಬೇಡ ಎನ್ನಲು ಅವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗ, ನ್ಯಾಯಾಲಯ ಹೇಳಿದರೆ ಅದಕ್ಕೆ ನಾನು ಬದ್ಧ. ಆದರೆ ಬಿಜೆಪಿ ನಾಯಕರು ನನಗೆ ಮೋದಿ ಫೋಟೋ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಅವರು ಯಾರು? ಮೋದಿ ಫೋಟೋ ಇಲ್ಲದೇ ಅವರು ಪ್ರಚಾರಕ್ಕೆ ಹೋಗಲಿ ಎಂದು ಸವಾಲು ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದಲ್ಲಿ ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಿಂದುತ್ವವಾದಿ ಈಶ್ವರಪ್ಪಗೆ ಬೆಂಬಲ ಎಂಬ ಅಭಿಪ್ರಾಯ ಬರುತ್ತಿದೆ. ಸಾಮಾನ್ಯ ಜನರೇ ನನಗೆ ಸ್ಟಾರ್ ಪ್ರಚಾರಕರು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular