HomeKarnatakaBIG NEWS: ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್ ಖರ್ಗೆ ಅಂತವರು ಹುಟ್ಟಿರುವುದೇ ಅನ್ಯಾಯ; ಈಶ್ವರಪ್ಪ ವಾಗ್ದಾಳಿ

BIG NEWS: ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್ ಖರ್ಗೆ ಅಂತವರು ಹುಟ್ಟಿರುವುದೇ ಅನ್ಯಾಯ; ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಸಚಿವ ಪ್ರಿಯಾಂಕ್ ಖರ್ಗೆ ಯಾರೂ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದಿದ್ದರು. ಎ2 ಆರೋಪಿ ಕುಟುಂಬ ಸಮೇತ ಓಡಿಹೋಗಿದ್ದಾನೆ. ಆತ ಓಡಿ ಹೋಗಲು ಕಾರಣ ಯಾರು? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್ ಖರ್ಗೆ ಅಂತವರು ಹುಟ್ಟಿದ್ದೇ ಅನ್ಯಾಯ ಎಂದು ಕಿಡಿಕಾರಿದರು.

ಎ2 ಆರೋಪಿ ಓಡಿ ಹೋಗಲು ಪೊಲೀಸರ ವೈಫಲ್ಯ ಕಾರಣವೇ? ಅಥವಾ ರಾಜ್ಯ ಸರ್ಕಾರವೇ ಸಹಕಾರ ಕೊಟ್ಟಿದೆಯೆ? ಅಥವಾ ಪಾಕಿಸ್ತಾನ ಪರವಾಗಿ ಇರುವ ವ್ಯಕ್ತಿಗಳು ಸಹಕಾರ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ರಾಷ್ಟ್ರದ್ರೋಹಿಗಳ ತಾಣವಾಗುತ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್, ರಾಜ್ಯದಲ್ಲಿ ಮಾಮೂಲಿ ಆಗಿರುವುದು ರಾಜ್ಯದ ಜನತೆಗೆ ಅಪಮಾನ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಆತ ಬಾಯ್ತಪ್ಪಿ ಹೇಳಿದ್ದಾನೆ. ಆತನ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಪಮಾನ ಆಯ್ತು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಯಾವೊಬ್ಬ ಬಿಜೆಪಿ ಕಾರ್ಯಕರ್ತ ರಾಷ್ಟ್ರದ್ರೋಹಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular