HomeLatest NewsBIG NEWS: ಸದ್ಯಕ್ಕೆ ನಾನು ಬಿಜೆಪಿಗೆ ಮರಳುವ ಪರಿಸ್ಥಿತಿಯಲ್ಲಿಲ್ಲ: ಈಶ್ವರಪ್ಪ ಹೇಳಿಕೆ

BIG NEWS: ಸದ್ಯಕ್ಕೆ ನಾನು ಬಿಜೆಪಿಗೆ ಮರಳುವ ಪರಿಸ್ಥಿತಿಯಲ್ಲಿಲ್ಲ: ಈಶ್ವರಪ್ಪ ಹೇಳಿಕೆ

ಬೆಂಗಳೂರು: ಸದ್ಯಕ್ಕೆ ನಾನು ಬಿಜೆಪಿಗೆ ಮರಳುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸದ್ಯಕ್ಕೆ ನಾನು ಬಿಜೆಪಿಗೆ ಮರಳುವ ಪರಿಸ್ಥಿತಿಯಲ್ಲಿಲ್ಲ. ಮೊದಲು ಬಿಜೆಪಿಯಲ್ಲಿನ ಪರಿಸ್ಥಿತಿ ಸರಿಹೋಗಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯೇಂದ್ರ ಆಹ್ವಾನ ನೀಡಿರುವ ಬಗ್ಗೆ ಗೊತ್ತಿಲ್ಲ. ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಇನ್ನು ನನ್ನ ಮತ್ತು ಯಡಿಯೂರಪ್ಪನವರ ಸ್ನೇಹ ಬಹಳ ಹಳೆಯದು. ನಾವಿಬ್ಬರೂ ಪಾರ್ಟನರ್ ಶಿಪ್ ನಲ್ಲಿ ಹಿಂದೆ ಫ್ಯಾಕ್ಟರಿ ಮಾಡಿದ್ದೆವು. ನಮ್ಮಿಬ್ಬರ ಸ್ನೇಹ ಹಾಗೇ ಮುಂದುವರೆದಿದೆ. ಸ್ನೇಹಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಪತ್ರಿಕೆಗಳಲ್ಲಿಯೂ ಅವರು ಶುಭ ಕೋರಿಕೆ ಹಾಕಿಸಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಅವರು ಬಂದಿದ್ದಾರೆ. ಅವರ ಮನೆ ಕಾರ್ಯಕ್ರಮಕ್ಕೆ ನಾವು ಹೋಗಿದ್ದೇವೆ. ಸ್ನೇಹವೇ ಬೇರೆ, ರಾಜಕಾರಣವೇ ಬೇರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular