ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ದರ್ಶನ್ ಬಗ್ಗೆ ಕೇಳುತ್ತಿದ್ದಂತೆ ಕಿಡಿಕಾರಿದ ಸಚಿವ ಕೆ.ಎನ್.ರಾಜಣ್ಣ

ಹಾಸನ: ಬೆಳಿಗ್ಗೆ ಎದ್ದರೆ ಟಿಯಿಯಲ್ಲಿ ಬರಿ ದರ್ಶನ್ ಬಗ್ಗೆ ತೋರಿಸುತ್ತೀರಿ. ಅವನನ್ನು ಬಿಟ್ಟು ಬೇರೆ ಯಾವ ವಿಚಾರ ಇಲ್ಲವೇ? ಒಳ್ಳೆಯ ವಿಚಾರಗಳನ್ನು ತೋರಿಸಿ ಎಂದು ಮಾಧ್ಯಮಗಳಿಗೆ ಸಚಿವ ಕೆ.ಎನ್.ರಾಜಣ್ಣ ಸಲಹೆ ನಿಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ದೇಶದಲ್ಲಿ ದರ್ಶನ್ ವಿಚಾರ ಬಿಟ್ಟು ಬೇರೆ ಯಾವ ಸುದ್ದಿ ಇಲ್ಲವೇ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಆತನನ್ನೇ ತೋರಿಸುತ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಎಂದು ಕಿಡಿಕಾರಿದರು.

ಒಳ್ಳೆಯ ಕಲಾವಿದ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದ ಮಾತ್ರಕ್ಕೆ ಮಾಡಬಾರದ್ದು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಮೂರು ಹೊತ್ತು ಆತನ ಬಗ್ಗೆಯೇ ತೋರಿಸಿದರೆ ಹೇಗೆ? ಮತ್ತೆ ಮತ್ತೆ ಅದೇ ಸ್ಟೊರಿ ನೋಡಿ ಅಸಹ್ಯವಾಗುತ್ತೆ. ಟಿವಿಯವರಿಗೆ ಬೇರೆ ಕೆಲಸವಿಲ್ವಾ? ಎಂದು ಗುಡುಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read