HomeKarnatakaಸಚಿವ ಕೆ.ಎನ್. ರಾಜಣ್ಣಗೆ ಮಠ ಮಾಡಿ ಕೊಡ್ತೀವಿ: ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಗರಂ ಆದ ಸಹಕಾರ...

ಸಚಿವ ಕೆ.ಎನ್. ರಾಜಣ್ಣಗೆ ಮಠ ಮಾಡಿ ಕೊಡ್ತೀವಿ: ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಗರಂ ಆದ ಸಹಕಾರ ಸಚಿವ

ತುಮಕೂರು: ಸಚಿವ ಕೆ.ಎನ್. ರಾಜಣ್ಣಗೆ ಮಠ ಮಾಡಿ ಕೊಡ್ತೀವಿ ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ ರಾಜಣ್ಣ ಗರಂ ಆಗಿದ್ದಾರೆ. ಬೆವರು ಸುರಿಸದೇ ಜೀವನ ಮಾಡುವ ಸಲಹೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ನೇರವಾಗಿ ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೆ.ಎನ್.ರಾಜಣ್ಣ, ಸಿಎಂ ಸ್ಥಾನ ಯಾರು ಬಿಟ್ಟುಕೊಡುತ್ತಾರೆ? ಸ್ವಾಮೀಜಿ, ಅವರ ಸ್ಥಾನ ಬಿಟ್ಟು ಕೊಡ್ತಾರಾ? ಬಿಟ್ಟು ಕೊಟ್ಟರೆ ನಾನೇ ಸ್ವಾಮಿ ಆಗುತ್ತೇನೆ ಎಂದಿದ್ದರು.

ಇದೀಗ ಸಚಿವರ ಹೇಳಿಕೆಗೆ ಚಂದ್ರಶೇಖರ ಸ್ವಾಮಿಜಿ, ಸಚಿವ ರಾಜಣ್ಣಗೆ ಮಠ ಮಾಡಿ ಕೊಡುತ್ತೇವೆ ಎಂದಿದ್ದಾರೆ. ಸ್ವಾಮೀಜಿ ಹೇಳಿಕೆ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಒಳ್ಳೆಯ ಸಲಹೆ ನೀಡಿದ್ದಾರೆ. ಸ್ವಾಮೀಜಿ ಸಲಹೆ ಪರಿಶೀಲನೆ ಮಾಡ್ತೀನಿ. ಬೆವರು ಸುರಿಸದೇ ಜೀವನ ಮಾಡುವ ಬಗ್ಗೆ ಶ್ರೀಗಳು ಸಲಹೆ ನೀಡಿದ್ದಾರೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚುವರಿ ಡಿಸಿಎಂ ಹುದ್ದೆ ಕೇಳುವುದರಲ್ಲಿ ತಪ್ಪೇನಿದೆ? ಅಂತಿಮವಾಗಿ ನಿರ್ಣಯ ಮಾಡೋದು ಹೈಕಮಾಂಡ್. ಹೆಚ್ಚುವರಿ ಡಿಸಿಎಂ ಕೇಳದಿದ್ದರೆ ಹೈಕಮಾಂಡ್ ಗಮನಕ್ಕೆ ಹೇಗೆ ಬರುತ್ತದೆ? ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿ. ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular