ಹಗರಣ ಚರ್ಚೆಯಾಗಬಾರದೆಂದು ದರ್ಶನ್ ಫೋಟೋ ಬಿಡುಗಡೆ: ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಚಿವ ಮುನಿಯಪ್ಪ ತಿರುಗೇಟು

ಬೆಂಗಳೂರು: ಹರಗರಣ ಚರ್ಚೆಯಾಗಬಾರದು ಎಂದು ಸರ್ಕಾರ ದರ್ಶನ್ ಫೋಟೋ ಬಿಡುಗಡೆ ಮಾಡಿದೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತಿಗೆ ಕಿಡಿಕಾರಿರುವ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ತಮಗೆ ಹೇಗೆ ಅನುಕೂಲ ಹಾಗೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ, ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆ ಮಾಡಲು ಹೇಳಿದ್ದೇವೆ. ಅವರು ತನಿಖೆ ಮಾಡುತ್ತಿದ್ದಾರೆ. ಸರ್ಕಾರ ದರ್ಶನ್ ಫೋತೋ ಬಿಡುಗಡೆ ಮಾಡಲ್ಲ. ಪ್ರಹ್ಲಾದ್ ಜೋಷಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರು ಬೇಕಂತಲೇ ಆರೋಪ ಸೃಷ್ಟಿ ಮಡಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಜೋಷಿ ಕೇಂದ್ರ ಮಂತ್ರಿ. ಮೊದಲು ರಾಜ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕೊಡಿಸಲಿ. ನೀರಾವರಿ, ರಸ್ತೆ, ರೈಲುಮಾರ್ಗ ಈ ಯೋಜನೆಗಳನ್ನು ಮೊದಲು ಕೊಡಿ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹಲವು ಯೋಜನೆಗಳನ್ನು ರಾಜ್ಯಕ್ಕೆ ತಂದಿದ್ದೇವೆ. ಅವುಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಸಹಕಾರ ಕೊಡಲಿ. ಅದನ್ನು ಬಿಟ್ಟು ಅನಗತ್ಯ ಆರೋಪಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read