HomeKarnatakaBIG NEWS: ವಿಮಾನದಲ್ಲಿಯೇ 'ರಾಮ ನಾಮ ಜಪ' ಬರೆದ ಕಾಂಗ್ರೆಸ್ ಸಚಿವ ಕೆ.ಹೆಚ್.ಮುನಿಯಪ್ಪ

BIG NEWS: ವಿಮಾನದಲ್ಲಿಯೇ ‘ರಾಮ ನಾಮ ಜಪ’ ಬರೆದ ಕಾಂಗ್ರೆಸ್ ಸಚಿವ ಕೆ.ಹೆಚ್.ಮುನಿಯಪ್ಪ

ಬೆಂಗಳೂರು: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿರುವ ವಿಚಾರವಾಗಿ ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರ ನಡೆಗೆ ಕೆಲ ಕಾಂಗ್ರೆಸ್ ಸಚಿವರು, ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಸಚಿವರೊಬ್ಬರು ವಿಮಾನದಲ್ಲಿಯೇ ‘ರಾಮ ನಾಮ ಜಪ’ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದು, ಬಿಜೆಪಿ ರಾಜಕೀಯ ಕಾರ್ಯಕ್ರಮವನ್ನಾಗಿಸಿದೆ ಆ ಕಾರಣಕ್ಕೆ ಕಾಂಗ್ರೆಸ್ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದೆ. ಆದರೆ ನಾವ್ಯಾರೂ ರಾಮನ ವಿರೋಧಿಗಳಲ್ಲ ನಾವೆಲ್ಲರೂ ಶ್ರೀರಾಮಚಂದ್ರನ ಭಕ್ತರೇ ಎಂದು ಹೇಳಿದ್ದಾರೆ.

ಈ ಮಧ್ಯೆ ಕೆಲ ಕಾಂಗ್ರೆಸ್ ಸಚಿವರುಗಳು ಕಾಂಗ್ರೆಸ್ ನಾಯಕರ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಾ ರಾಮ ನಾಮ ಜಪಿಸಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಸಚಿವ ಮುನಿಯಪ್ಪ ವಿಮಾನದಲ್ಲಿಯೇ ’ರಾಮ ನಾಮ ಜಪ’ ಬರೆದಿದ್ದಾರೆ. ಈ ಮೂಲಕ ತಾವು ಕೂಡ ಶ್ರೀರಾಮನ ಭಕ್ತ ಎಂದು ಸಂದೇಶ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಐಸಿಸಿ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಸಚಿವ ಕೆ.ಹೆಚ್.ಮುನಿಯಪ್ಪ, ಸಭೆಗೆ ತೆರುವ ವೇಳೆ ವಿಮಾನದಲ್ಲಿ ಕುಳಿತು ಜೈ ಶ್ರೀರಾಮ್ ಎನ್ನುತ್ತಾ ರಾಮ ನಾಮ ಜಪ ಬರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular