HomeKarnatakaಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ; ICUನಲ್ಲಿದ್ದ ರೋಗಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಥಳಿತ

ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ; ICUನಲ್ಲಿದ್ದ ರೋಗಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಥಳಿತ

ಬೆಂಗಳೂರು: ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೊಪ ಕೇಳಿಬಂದಿದೆ. ಐಸಿಯುನಲ್ಲಿದ್ದ ರೋಗಿಗೆ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯು ವಾರ್ಡ್ ಸೇರಿದ್ದ ರೋಗಿಗೆ ಮೇ 24ರಂದು ರಾತ್ರಿ ಆಸ್ಪತ್ರೆಯ ವಾರ್ಡ್ ಬಾಯ್ ಧನಂಜಯ್ ಎಂಬುವವರು ಮನಬಂದಂತೆ ಥಳಿಸಿದ್ದಾರೆ.

ಚಿಕಿತ್ಸೆಯ ವೇಳೆ ರೋಗಿ ಕೂಗಾಡಿದ್ದರು ಎಂಬ ಕಾರಣಕ್ಕೆ ರಕ್ತ ಬರುವಂತೆ ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿನ ಅಮಾನವೀಯ ಘಟನೆಗೆ ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular