HomeLatest Newsಶತಕದ ಹೊಸ್ತಿಲಲ್ಲಿ ಧ್ರುವ್ ಜುರೆಲ್: ಕೊಲಂಬೋದಲ್ಲಿ ಭಾರತದ ಅಬ್ಬರಕ್ಕೆ ಮಳೆ ಅಡ್ಡಿ

ಶತಕದ ಹೊಸ್ತಿಲಲ್ಲಿ ಧ್ರುವ್ ಜುರೆಲ್: ಕೊಲಂಬೋದಲ್ಲಿ ಭಾರತದ ಅಬ್ಬರಕ್ಕೆ ಮಳೆ ಅಡ್ಡಿ

ಕೊಲಂಬೋದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದದಾಟಕ್ಕೆ ಮಳೆ ಅಡ್ಡಿಪಡಿಸಿದೆ. ಟೀಮ್ ಇಂಡಿಯಾ ಪರ ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಯುವ ಆಟಗಾರ ಧ್ರುವ್ ಜುರೆಲ್ ಶತಕದ ಹೊಸ್ತಿಲಿನಲ್ಲಿ ನಿಂತಿದ್ದಾರೆ.

ಧ್ರುವ್ ಜುರೆಲ್ 95 ರನ್ ಗಳಿಸಿ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಂಪೈರ್‌ಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಚಹಾ ವಿರಾಮ ಘೋಷಿಸಿದರು. ಜುರೆಲ್ ಜೊತೆ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ. ಧ್ರುವ್ ಜುರೆಲ್ ತಮ್ಮ ಎರಡನೇ ಟೆಸ್ಟ್ ಶತಕವನ್ನು ಪೂರೈಸಲು ಇನ್ನು ಕೇವಲ ಐದು ರನ್‌ಗಳ ಅಗತ್ಯವಿದೆ. ಮಳೆ ನಿಂತು ಪಂದ್ಯ ಪುನರಾರಂಭಗೊಂಡರೆ ಅವರು ಮೂರು ಅಂಕಿಗಳ ಮೊತ್ತ ದಾಟುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ.

ಆರಂಭಿಕ ಹಂತದಲ್ಲಿ ಹಲವು ವಿಮರ್ಶೆಗಳನ್ನು ಎದುರಿಸಿದ್ದ ಜುರೆಲ್, ಪ್ರಸ್ತುತ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದ ಇವರು, ಕೊಲಂಬೋದಲ್ಲಿಯೂ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಂದುವರಿಸಿದ್ದಾರೆ. ಕ್ರೀಸ್‌ಗೆ ಇಳಿದ ಜುರೆಲ್, ರಿಷಬ್ ಪಂತ್ ಅವರೊಂದಿಗೆ ಸೇರಿ ಶತಕದ ಸಹಭಾಗಿತ್ವದ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈದಾನದಲ್ಲಿ ದಿಢೀರ್ ಆಗಿ ಕಪ್ಪು ಮೋಡಗಳು ಕವಿದು ಭಾರಿ ಮಳೆ ಸುರಿಯಲು ಪ್ರಾರಂಭಿಸಿದ್ದರಿಂದ ಸಿಬ್ಬಂದಿ ಇಡೀ ಪಿಚ್ ಹಾಗೂ ಮೈದಾನವನ್ನು ಕವರ್‌ಗಳಿಂದ ಮುಚ್ಚಿದ್ದಾರೆ. ಕೊಲಂಬೋದಲ್ಲಿ ಹವಾಮಾನ ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಇಂದಿನ ಆಟದಲ್ಲಿ ಸಾಕಷ್ಟು ಸಮಯ ನಷ್ಟವಾಗುವ ಸಾಧ್ಯತೆಯಿದೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular