HomeInternationalVideo | ತ್ರಿವರ್ಣಕ್ಕೆ ಅವಮಾನ ಮಾಡಿದವನ ವಿರುದ್ಧ ದಿಟ್ಟ ನಿಲುವು ತೋರಿದ ಪತ್ರಕರ್ತ

Video | ತ್ರಿವರ್ಣಕ್ಕೆ ಅವಮಾನ ಮಾಡಿದವನ ವಿರುದ್ಧ ದಿಟ್ಟ ನಿಲುವು ತೋರಿದ ಪತ್ರಕರ್ತ

ವಿಶ್ವ ಸಂಸ್ಥೆ ಪ್ರಧಾನ ಕಚೇರಿ ಬಳಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿರುವ ಘಟನೆಯ ವಿಡಿಯೋವೊಂದನ್ನು ಬಿಜೆಪಿ ನಾಯಕ ತೇಜೀಂದರ್‌ ಬಗ್ಗಾ ಶೇರ್‌ ಮಾಡಿದ್ದಾರೆ.

ಜೂನ್ 21ರಂದು ನಡೆದ ಈ ಘಟನೆಯ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಹೀಗೆ ಮಾಡಲು ಬಂದ ಖಾಲಿಸ್ತಾನೀ ಬೆಂಬಲಿಗನೊಬ್ಬನನ್ನು ಹಿಂದಕ್ಕೆ ತಳ್ಳಿ ರಾಷ್ಟ್ರಧ್ವಜಕ್ಕೆ ಹೀಗೆ ಮಾಡದಿರಲು ಆತನಿಗೆ ಹೇಳುತ್ತಿರುವುದನ್ನು ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ರಕರ್ತನ ಈ ದಿಟ್ಟ ನಡೆ ಹಾಗೂ ಆತನ ಬೆಂಬಲಕ್ಕೆ ನಿಂತ ಇನ್ನಿತರರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಪತ್ರಕರ್ತನನ್ನು ವಿಕಾಸ್ ಭದೌರಿಯಾ ಎಂದು ಗುರುತಿಸಲಾಗಿದೆ.

ತ್ರಿವರ್ಣಕ್ಕೆ ಅವಮಾನ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅನೇಕರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular