HomeKarnatakaಉದ್ಯೋಗ ವಾರ್ತೆ : ‘KPTCL’ ನಲ್ಲಿ ಪವರ್ ಮ್ಯಾನ್ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ...

ಉದ್ಯೋಗ ವಾರ್ತೆ : ‘KPTCL’ ನಲ್ಲಿ ಪವರ್ ಮ್ಯಾನ್ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ.!

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ‘ಆನ್ –ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ನವೆಂಬರ್ 25 ಕೊನೆಗೆ ದಿನಾಂಕವೆಂದು ನಿಗದಿಪಡಿಸಲಾಗಿತ್ತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಮತ್ತು ಎಸ್ಕಾಂಗಳಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇ -ಸಹಿ ಮಾಡಿ ಅಂಚೆ ಚಲನ್ ಪಡೆಯುವ ಮತ್ತು ಅರ್ಜಿ ಶುಲ್ಕ ಪಾವತಿಸುವ ದಿನಾಂಕವನ್ನು ಕ್ರಮವಾಗಿ ಡಿಸೆಂಬರ್ 5 ಮತ್ತು 10ರವರೆಗೆ ವಿಸ್ತರಿಸಲಾಗಿದೆ.

ಒಟ್ಟು 2975 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ‘ಆನ್ -ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕವಿಪ್ರನಿನಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಗಿನ ಯಾವುದಾದರೂ ಒಂದು ಅಧಿಕೃತ ವೆಬ್ಸೈಟ್ ಮುಖಾಂತರ ನಿಗದಿತ ನಮೂನೆಯಲ್ಲಿ ‘ಆನ್ ಲೈನ್’ ಮೂಲಕ ಮಾತ್ರ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
https://kptcl.karnataka.gov.in
https://bescom.karnataka.gov.in
https://cescmysore.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in

ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರೆ ವಿವರಗಳನ್ನು ಒಳಗೊಂಡ ವಿಸ್ತ್ರತ ಉದ್ಯೋಗ ಪ್ರಕಟಣೆಯನ್ನು ಮೇಲೆ ತಿಳಿಸಿರುವ ವೆಬ್ ಸೈಟ್ಗಳಲ್ಲಿ ಪ್ರಕಟಿಸಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular