HomeKarnatakaJOB ALERT : ನವೋದಯ ವಿದ್ಯಾಲಯದ ಶಿಕ್ಷಕರ ಹುದ್ದೆಗಳಿಗೆ ನಾಳೆ ನೇರ ಸಂದರ್ಶನ

JOB ALERT : ನವೋದಯ ವಿದ್ಯಾಲಯದ ಶಿಕ್ಷಕರ ಹುದ್ದೆಗಳಿಗೆ ನಾಳೆ ನೇರ ಸಂದರ್ಶನ

ಮಡಿಕೇರಿ : ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಗಣಿತ ಶಿಕ್ಷಕರ ಎರಡು ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ನೇರ ಸಂದರ್ಶನವು ನವೆಂಬರ್, 28 ರಂದು ಬೆಳಗ್ಗೆ 10.30 ಗಂಟೆಗೆ ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲರ ಕಚೇರಿಯಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗೆ https://navodaya.gov.in/nvs/nvs-school/KODAGU/en/home/ ದೂ.ಸಂ. 8921089811, 6361148504 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ.

ಸಹಕಾರ ಡಿಪ್ಲೊಮಾ ತರಬೇತಿಗೆ ಅರ್ಜಿ ಆಹ್ವಾನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ (ಕೆಐಸಿಎಂ) ಮಡಿಕೇರಿ ಇಲ್ಲಿ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್’’ (ಡಿಸಿಎಂ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಎಸ್ಎಲ್ಸಿ / ಪಿಯುಸಿ / ಪದವಿ / ಸ್ನಾತಕೋತ್ತರ ಪದವಿ ಪಡೆದಿರಬೇಕು. ತರಬೇತಿ ಅವಧಿ 6 ತಿಂಗಳು. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಹೆಯಾನ ರೂ.600 ಹಾಗೂ ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ.500 ರಂತೆ ಶಿಷ್ಯವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 8792628437, 9845318364, 9663153922, 8762925862, 8762110952ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲರಾದ ಡಾ.ರೇಣುಕಾ ಆರ್.ಎಸ್ ಅವರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular