
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ವಿದ್ಯಾರ್ಹತೆ ಎಂ.ಎಸ್ಸಿ (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ/ ರೇಷ್ಮೆ). ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂ.ಎಸ್.ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಟ ವಯೋಮಿತಿ 45 ವರ್ಷ ಮಾಸಿಕ ರೂ.30 ಸಾವಿರ ಆಗಿದೆ.
ಈ ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ನವೆಂಬರ್, 07 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ(ಆತ್ಮ ವಿಭಾಗ) ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ತಿಳಿಸಿದ್ದಾರೆ.

