HomeEntertainmentJo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿಬಿಲ್ಡರ್ 'ಜೋ ಲಿಂಡ್ನರ್' ಅನುಮಾನಾಸ್ಪದ ಸಾವು

Jo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ‘ಜೋ ಲಿಂಡ್ನರ್’ ಅನುಮಾನಾಸ್ಪದ ಸಾವು

ಬಾಡಿ  ಬಿಲ್ಡಿಂಗ್ ನಲ್ಲಿ   ವಿಶ್ವ ವಿಖ್ಯಾತಿ ಪಡೆದಿದ್ದ ಜೋಎಸ್ತೆಟಿಕ್ಸ್ ಎಂಬ ಹೆಸರಿನಿಂದ ಫೇಮಸ್ ಆಗಿದ್ದ ತಾರೆ ಜೋ ಲಿಂಡ್ನರ್ ಮೃತಪಟ್ಟಿದ್ದಾರೆ . ಅವರಿಗೆ 30 ವರ್ಷ ವಯಸ್ಸಾಗಿದ್ದು, ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಜೋ ಲಿಂಡ್ನರ್ ಅವರು ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ನಟಿಸಿದ್ದರು. ಈ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಧ್ರುವ ಸರ್ಜಾ ಜೊತೆ ಫೈಟ್ ಮಾಡಿದ್ದರು.

ಅವರು 8.5 ಮಿಲಿಯನ್ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದರು, ಮತ್ತು ಅವರ ವೀಡಿಯೊಗಳು ಅವರ ಯೂಟ್ಯೂಬ್ ಚಾನೆಲ್ನಲ್ಲಿ ಸುಮಾರು 500 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಲಿಂಡ್ನರ್ ಕೊನೆಯದಾಗಿ ಫಿಟ್ನೆಸ್ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಅನೇಕರಿಗೆ ಮಾದರಿ ಆಗಿದ್ದ ಜೋ ಲಿಂಡ್ನರ್ ನಿಧನ ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular