ಯಮ ಸಲ್ಲೇಖನ ವ್ರತ ಕೈಗೊಂಡಿದ್ದ ಸಮಾಧಿಸೇನ ಮುನಿ ಜಿನೈಕ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೋಥಳಿಯ ದೇಶಭೂಷಣ ಮನಿಗಳ ಜೈನ ಆಶ್ರಮದಲ್ಲಿ ಕಳೆದ ನಾಲ್ಕು ದಿನಗಳಿಂದ ಯಮ ಸಲ್ಲೇಖನ ವ್ರತ ಕೈಗೊಂಡಿದ್ದ ಸಮಾಧಿಸೇನ ಮುನಿಗಳು ಸೋಮವಾರ ರಾತ್ರಿ 9:30ಕ್ಕೆ ಜಿನೈಕ್ಯರಾಗಿದ್ದಾರೆ.

ಆಶ್ರಮದ ಆವರಣದಲ್ಲಿಯೇ ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಮಾಧಿಸೇನ ಮುನಿಗಳಿಗೆ  79 ವರ್ಷ ವಯಸ್ಸಾಗಿತ್ತು. ಮೇ 17 ರಿಂದ ಶ್ರೀಗಳು ಆಹಾರ ತ್ಯಾಗ ಮಾಡಿದ್ದರು. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕು, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಯಿಂದ ಅಪಾರ ಸಂಖ್ಯೆಯ ಭಕ್ತರು ಆಶ್ರಮಕ್ಕೆ ಬಂದು ಮುನಿಗಳ ದರ್ಶನ ಪಡೆದಿದ್ದರು.

ಗದಗ ಜಿಲ್ಲೆಯ ಗಜೇಂದ್ರಗಡದವರಾದ ಸಮಾಧಿಸೇನ ಮುನಿ ಅವರು ಗುಲಾಬಭೂಷಣ ಮುನಿಯವರ ಶಿಷ್ಯರಾಗಿದ್ದರು. ಸಂಸಾರಿಯಾಗಿದ್ದ ಅವರು 2004ರಲ್ಲಿ ಮನೆ ತೊರೆದು ತ್ಯಾಗಿಯಾಗಿ ದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ ಆಶ್ರಮದ ಧರ್ಮಸೇನಾ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದಿದ್ದರು. 2021 ರಲ್ಲಿ ಗುಲಾಬಿಸೇನ ಮುನಿ ಅವರಿಂದ ಮುನಿ ದೀಕ್ಷೆ ಪಡೆದಿದ್ದರು. ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿ ಇದುವರೆಗೆ 40ಕ್ಕೆ ಅಧಿಕ ಜೈನ ಮುನಿಗಳು ಯಮ ಸಲ್ಲೇಖನ ವ್ರತ ಕೈಗೊಂಡ ದೇಹ ತ್ಯಾಗ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read