HomeEntertainment'ಜಿಗರ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಜಿಗರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇದೀಗ ಹಾಡುಗಳ ಹಬ್ಬವೇ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿವೆ. ಸೂರಿ ಕುಂದರ್ ನಿರ್ದೇಶನದ ‘ಜಿಗರ್’ ಚಿತ್ರದ ವಿಡಿಯೋ ಹಾಡು ನಿನ್ನೆ  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ಗಾನಪ್ರಿಯರ  ಗಮನ ಸೆಳೆದಿದೆ.

ಸ್ಯಾಂಡಲ್ ವುಡ್ ನ ಬೇಡಿಕೆಯ ಗಾಯಕ ಸಂಜಿತ್ ಹೆಗಡೆ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಕೆ ಪ್ರೊಡಕ್ಷನ್ ಬ್ಯಾನರ್ ನಡಿ ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ವಿಜಯ್ ಶ್ರೀ ಮುಖ್ಯ ಭೂಮಿಕೆಯಲ್ಲಿದ್ದಾರೆ. ‘ಸುಮ್ಮನೆ ನಗಬಹುದೇ ಹುಡುಗಿ’ ಎಂಬ ಈ ಹಾಡು ಯೂಟ್ಯೂಬ್ ನಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular